ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಲಬುರಗಿ ಜಿಲ್ಲಾಧಿಕಾರಿಯ ಸರ್ಕಾರಿ ಕಾರು ಸೀಜ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ.
ಭೀಮಾ ಏತ ನೀರಾವರಿ ಪ್ರೋಜೆಕ್ಟ್ ನಲ್ಲಿ ಭೂಮಿ ಕಳೆದುಕೊಂಡ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಪರಿಹಾರ ನೀಡದೆ ವಿಳಂಬ ಮಾಡುತ್ತಿದ್ದ ಜಿಲ್ಲಾಧಿಕಾರಿ ವಿರುದ್ಧ ಕೋರ್ಟ್ ಮೊರೆ ಹೊಗಿದ್ದ.
ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನಲೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸರ್ಕಾರಿ ಕಾರನ್ನ ಜಪ್ತಿ ಮಾಡುವಂತೆ ಒಂದನೆ ಹೆಚ್ಚುವರಿ ಜಿಲ್ಲಾ ನ್ಯಾಯಲಯ ಆದೇಶ ಮಾಡಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲೆಶ್ ಮೇತ್ರೆ ಅವರ 33 ಗುಂಟೆ ಜಮೀನು 2010ರಲ್ಲಿ ಭೀಮಾ ಏತ ನೀರವಾರಿ ಪ್ರಾಜೆಕ್ಟ್ ನಲ್ಲಿ ಮುಳುಗಡೆಯಾಗಿತ್ತು. ಜಮೀನು ಮುಳುಗಡೆಯಾದ ಹಿನ್ನೆಲೆಯಲ್ಲಿ ಪರಿಹಾರ ರೂಪದಲ್ಲಿ 7 ಲಕ್ಷ 41 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಹಿನ್ನಲೆ ರೈತ ಕೋರ್ಟ್ ಮೊರೆ ಹೋಗಿದ್ದ.
2010ರಲ್ಲಿ ಭೀಮಾ ಏತ ನಿರಾವರಿ ಯೋಜನೆ ಅಡಿಯಲ್ಲಿ ಜಮೀನು ಮುಳುಗಡೆಯಾಗಿತ್ತು. ಜಮೀನು ಮುಳುಗಡೆಯಾದ ಬಳಿಕ ಕೆಎನ್ ಎನ್ ಎಲ್ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ಅಧಿಕಾರಿಗಳು ಅಲ್ಪ ಪರಿಹಾರ ನೀಡಿದ್ದರು. ಪರಿಹಾರ ಮೊತ್ತ ಕಡಿಮೆಯಾಗಿದೆ ಅಂತಾ ರೈತ ಕೋರ್ಟ್ ಮೊರೆ ಹೋಗಿದ್ದ. ರೈತ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚುವರಿ ಮೊತ್ತವನ್ನ ನೀಡುವಂತೆ 2018ರಲ್ಲಿ ಕೋರ್ಟ್ ಆದೇಶ ಮಾಡಿತ್ತು. ಆದರೆ ಕೋರ್ಟ್ ಆದೇಶ ಬಳಿಕ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರು.
ಅಧಿಕಾರಿಗಳ ವಿಳಂಬ ಮಾಡಿದ ಹಿನ್ನಲೆಯಲ್ಲಿ ರೈತ ಪರಿಹಾರಕ್ಕಾಗಿ ಸರ್ಕಾರಿ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ. ಹಾಗಾಗಿ ರೈತ ಮತ್ತೆ ಜಿಲ್ಲಾ ಒಂದನೆ ಹೆಚ್ಚುವರಿ ನ್ಯಾಯಲಯದ ಮೊರೆ ಹೋಗಿದ್ದರು. ಕೋರ್ಟ್ ಇದೀಗ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ಹೊರಿಡಿಸಿದ ಹಿನ್ನಲೆ ಕೋರ್ಟ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರು ಜಪ್ತಿಗೆ ಮುಂದಾಗಿದ್ದರು. ಆದ್ರೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಕಾರು ಕೀ ನೀಡದ ಹಿನ್ನೆಲೆಯಲ್ಲಿ ಮಧ್ಯಾಹ್ನ ಎರಡು ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೋರ್ಟ್ ಸಿಬ್ಬಂದಿ ರೈತ ಮತ್ತು ವಕೀಲರು ಕಾಯುವಂತಾಯಿತು.. ಬಳಿಕ ಕಚೇರಿಯಿಂದ ಹೊರ ಬಂದ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಮ್ಮ ಕಾರನ್ನ ತೆಗೆದುಕೊಂಡು ಹೋದರು.
ರೈತನಿಗೆ ಬಾಕಿ ಉಳಿಸಿಕೊಂಡಿರುವ ಪರಿಹಾರದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಪರಿಹಾರದ ಮೊತ್ತವನ್ನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರಂತೆ. ಕೆಎನ್ ಎನ್ ಎಲ್ ನಿಗಮದ ಅಧಿಕಾರಿ ಜಿಲ್ಲೆಯಲ್ಲಿ ಇರದ ಕಾರಣ ನಾಳೆ ಕೋರ್ಟ್ ಮುಖಾಂತರ ಚೆಕ್ ಪಾವತಿ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರಂತೆ. ಒಟ್ನಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಸರಿಯಾದ ಸಮಯಕ್ಕೆ ಪರಿಹಾರ ನೀಡದೆ ಸತಾಯಿಸುತ್ತಿದ್ದವರಿಗೆ ಕೋರ್ಟ್ ಸರಿಯಾಗೆ ಚಾಟಿ ಬಿಸಿದೆ.