ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಗೆ ಕನ್ನಡದ ಯುವ ನಟಿಯರು ಸಾಥ್ ಕೊಟ್ಟಿದ್ದಾರೆ. ಪ್ರಾಣಿಗಳನ್ನ ದತ್ತು ಪಡೆಯುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಕೊರೊನಾದಿಂದಾಗಿ ಪ್ರಾಣಿ ಸಂಗ್ರಹಾಲಗಳು ನಷ್ಟದಲ್ಲಿದ್ದಾವೆ, ಪ್ರಾಣಿಗಳು ಸಂಕಷ್ಟದಲ್ಲಿವೆ. ಪ್ರಾಣಿಗಳ ರಕ್ಷಣೆಗೆ ಮುಂದಾಗಿ ಅಂತಾ ಸ್ಯಾಂಡಲ್ವುಡ್ ಒಡೆಯ ದಚ್ಚು ಮನವಿ ಮಾಡಿದ್ರು. ದರ್ಶನ್ ಮನವಿಗೆ ಸಾವಿರಾರು ಅಭಿಮಾನಿಗಳು ಕೈ ಚೋಡಿಸಿದ್ರು, ನಂತ್ರ ರಿಯಲ್ ಸ್ಟಾರ್ ಉಪೇಂದ್ರ ಆನೆಯ ದತ್ತು ಪಡೆದಿದ್ರೆ, ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಹರಿಕೃಷ್ಣ ಹುಲಿಯನ್ನ ದತ್ತ ಪಡೆದುಕೊಂಡಿದ್ರು.. ಆದ್ರೆ ಇದೀಗ ಕನ್ನಡದ ಯುವ ನಟಿಯರು ದಚ್ಚು ಮನವಿಗೆ ಅಸ್ತು ಎಂದಿದ್ದಾರೆ.
ಹೌದು, ದಚ್ಚುನ ದತ್ತು ತಂಗಿ ಅಂತಲೇ ಕರೆಸಿಕೊಳ್ಳುವ, ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಪತಿರಾಯ ಜಗಧೀಶ್ ಜೊತೆ ಸೇರಿ ಜಾಗ್ವರ್ ಅನ್ನ ದತ್ತು ಪಡೆದಿದ್ದಾರೆ.. ಮೈಸೂರು ಮೃಗಾಲಯದಲ್ಲಿ ದತ್ತು ಪಡೆದಿರೊ ಅಮೂಲ್ಯ, ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂದು ದರ್ಶನ್ಗೆ ಧನ್ಯವಾದ ಹೇಳಿದ್ದಾರೆ. ಇನ್ನು ಕಾರುಣ್ಯ ರಾಮ್ ಸಹ ಮೈಸೂರು ಮೃಗಾಲಯದಲ್ಲಿ ಚಿರತೆಯನ್ನ ಅಡಾಪ್ ಮಾಡಿಕೊಂಡಿದ್ದಾರೆ. ಇದಕ್ಕೆ ದರ್ಶನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರಹ್ಮಪುತ್ರ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿರೊ ಅಭಯ್ ವೀರ್ ಬೆಳಗಾವಿಯ ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಚಿರತೆಯನ್ನ ದತ್ತು ಪಡೆದಿದ್ದಾರೆ. ಇನ್ನು ಕನ್ನಡದ ಟ್ವಿನ್ಸ್ ಸ್ಟಾರ್ಸ್ ಅಶ್ವಿನಿ ಹಾಗೂ ಅದ್ವಿತಿ ಶೆಟ್ಟಿ ಇಬ್ಬರೂ ಪ್ರತ್ಯೇಕವಾಗಿ ಬನ್ನೇರುಗಟ್ಟ ಮೃಗಾಲಯದಲ್ಲಿ ಜೋಡಿ ಆಮೆಯನ್ನ ದತ್ತು ಪಡೆದಿದ್ದಾರೆ. ಪಂಚತಂತ್ರ ಹಾಗು ರಾಬರ್ಟ್ ಸಿನಿಮಾಗಳ ಮೂಲಕ ಮನೆಮಾತಾಗಿರೊ ಸೋನಾಲ್ ಮಂಥೆರೊ ಬನ್ನೇರುಗಟ್ಟ ಮೃಗಾಲಯದಲ್ಲಿ ಬಿಳಿ ನವಿಲನನ್ನ ದತ್ತು ಪಡೆದು, ದಾಸನ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಡೆಡ್ಲಿ ಸಿನಿಮಾ ಖ್ಯಾತೀಯ ನಿರ್ದೇಶಕ ಲವ್ ಬರ್ಡ್ಸ್ ದತ್ತು ಪಡೆದಿದ್ರೆ ಬಿಗ್ ಬಾಸ್ ಖ್ಯಾತೀಯ ಪ್ರಿಯಾಂಕ ತಿಮ್ಮೇಶ್, ಕೃಷ್ಣಮೃಗವನ್ನ ದತ್ತು ಪಡೆದುಕೊಂಡಿದ್ದಾರೆ. ನಿರ್ಮಾಪಕ ಸೌಂದರ್ಯ ಜಗಧೀಶ್ ಬೆಂಗಾಳಿ ಟೈಗರ್ ಅನ್ನ ಹಾಗೂ ಕಾವ್ಯ ನವಿಲು ದತ್ತು ಪಡೆದಿದ್ದಾರೆ.. ಶತಾಯಗತಾಯ ಚಿತ್ರದ ನಾಯಕಿ ಸೋನಿಕಾ ಸಹ ಬಿಳಿ ನವಿಲನ್ನ ದತ್ತು ಪಡೆದಿದ್ದಾರೆ. ಇನ್ನು ನಿರ್ದೇಶಕ ಕಂ ನಟ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿಯನ್ನ ದತ್ತು ಪಡೆದಿದ್ದಾರೆ. ಒಟ್ಟಾರೆ ದರ್ಶನ್ ಮಾಡಿದ ಮನವಿ ಅಂದು ಕೋಟಿ ದೇಣಿಗೆ ಸಂಗ್ರಹವಾಗಿತ್ತು. ಇದೀಗ ಸ್ಯಾಂಡಲ್ವುಡ್ ಯುವ ನಟನಟಿಯರು ಸಾಥ್ ಕೊಟ್ಟಿದ್ದು, ತಮ್ಮ ಮನವಿಗೆ ಸ್ಪಂದಿಸಿದ ಎಲ್ಲರಿಗೂ ದರ್ಶನ್ ಧನ್ಯವಾದ ಹೇಳಿದ್ದಾರೆ.
ದರ್ಶನ್ ಮನವಿಗೆ ಸ್ಪಂದಿಸಿದ ಯುವ ನಟಿಯರು
ಮೃಗಾಲಯದಿಂದ ಪ್ರಾಣಿಗಳನ್ನ ದತ್ತು ಪಡೆದ ನಾಯಕಿಯರು
ಜಾಗ್ವರ್ ದತ್ತು ಪಡೆದ ಗೋಲ್ಡನ್ ಕ್ವೀನ್ ಅಮೂಲ್ಯ
ಚಿರತೆ ಮೇಲೆ ಕಾರುಣ್ಯರಾಮ್ಗೆ ಪ್ಯಾರ್ಗೆ ಆಗ್ಬುಟೈತೆ
ಬೆಂಗಾಲಿ ಟೈಗರ್ಗೆ ಜೈ ಅಂದ್ರು ಸೌಂದರ್ಯ ಜಗದೀಶ್
ಕೃಷ್ಣಮೃಗಕ್ಕೆ ಕಣ್ ಹಾಕಿದ್ರು ಪ್ರಿಯಾಂಕಾ ತಿಮ್ಮೇಶ್
ಶೃಂಗಾರದ ಹೊಂಗೆಮರಕ್ಕೆ ಶ್ವೇತ ನವಿಲಿನ ಮೇಲಾಸೆ
ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿ ದತ್ತು ಪಡೆದ ಚಂದ್ರಚೂಡ್