ದಾವೋಸ್ ( Davos ) ಕಾರ್ಯಕ್ರಮ ಜನವರಿಯಲ್ಲಿ ನಡೆಯಬೇಕಿತ್ತು . ಕೋವಿಡ್ ( covid ) ಹಿನ್ನೆಲೆಯಲ್ಲಿ ಮೇನಲ್ಲಿ ನಡೆದಿದೆ ಎಂದು ಸಿಎಂ ಬೊಮ್ಮಾಯಿ ( Bommai ) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಈ ಹಿಂದೆ ಕೂಡ ಅನೇಕ ಮುಖ್ಯಮಂತ್ರಿಗಳು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ .
ದೇವೆಗೌಡ್ರು, (devegowda ) ಎಸ್ ಎಂ ಕೃಷ್ಣ (s.m.krishna ) , ಸಿದ್ದರಾಮಯ್ಯ (Siddaramiah ) , ಯಡಿಯೂರಪ್ಪ (yediyurappa)ಈ ಹಿಂದೆ ದಾವೋಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು . ಕೋವಿಡ್ ನಂತರ ಅರ್ಥಿಕತೆಗೆ ಹಿಂಜರಿತ ಆಗಿದ್ದರಿಂದ ಈ ಸಮಾವೇಶ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು . ಜಾಗತಿಕ ವಾತವಾರಣ ಬದಲಾವಣೆ ಬಗ್ಗೆ ಸಮಾವೇಶದಲ್ಲಿ ಮುಖ್ಯವಾಗಿ ಚರ್ಚೆಯಾಯಿತು. ಭಾರತ (india ) ಒಳಗೊಂಡಂತೆ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.ತಾಪಮಾನ ಬದಲಾವಣೆ, ನವೀಕರಿಸಬಹುದಾದ ಇಂಧನದ ಬಗ್ಗೆ ಚರ್ಚೆ ನಡೆದಿದೆ . ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಹೂಡಿಕೆ ಆಕರ್ಷಿಸುವ ಔಟ್ಲೆಟ್ ಆಗಿತ್ತು . ಕರ್ನಾಟಕ ದೊಡ್ಡ ಮಟ್ಟದಲ್ಲಿ ಆಕರ್ಷಣೆ ಮಾಡಿದೆ. ದಿನ ಪೂರ್ತಿ ಅನೇಕ ಹೂಡಿಕೆದಾರರು ಭೇಟಿ ನೀಡುತ್ತಿದ್ದರು . ಅವರೊಡನೆ ಚರ್ಚೆ ನಡೆಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ರು . ಇದನ್ನೂ ಓದಿ : – ದಾವೋಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ ಸಿಎಂ ಬೊಮ್ಮಾಯಿ