ಗಾಢ್ ಫೆಲ್ಲಾಸ್ ( GOD FELLAS) ಸೇರಿದಂತೆ ಸಾಕಷ್ಟು ಜನಪ್ರಿಯ ಹಾಲಿವುಡ್ (HOLLYWOOD) ಸಿನಿಮಾಗಳಲ್ಲಿ ನಟಿಸಿರುವ ರೇ ಲಿಯೊಟ್ಟಾ (Ray Liotta) ನಿಧನರಾಗಿದ್ದಾರೆ.
ವರದಿಗಳ ಪ್ರಕಾರ ರೇ ಲಿಯೊಟ್ಟಾ ಮಲಗಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದೆ. ಅಮೆರಿಕಾದ ಈ ನಟ, ನಿರ್ಮಾಪಕರಾಗಿಯೂ ಖ್ಯಾತಿ ಗಳಿಸಿದ್ದಾರೆ. 67ರ ವಯಸ್ಸಿನಲ್ಲೂ ಈ ನಟನಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳು ಇದ್ದರು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ಅಮೆರಿಕಾದ ಟಿವಿ ವಾಹಿನಿಗಳ ಸೀರಿಸ್ ಗಳಲ್ಲೂ ಅವರು ನಟಿಸಿದ್ದಾರೆ. ಅಲ್ಲದೇ, ಆಪಲ್ ಟಿವಿ, ಸಿರೀಸ್ ಬ್ಲಾಕ್ ಬರ್ಡನ್ ಟರೋನ್ ಎಗೆರ್ಟನ್ ನಲ್ಲೂ ಇವರು ನಟಿಸಿದ್ದರು. ಲಿಯೋಟ್ಟಾ ಪುತ್ರಿ ಹಾಗೂ ಕುಟುಂಬಸ್ಥರನ್ನ ಅಗಲಿದ್ದಾರೆ.
1954ರ ಡಿಸೆಂಬರ್ 18ರಂದು ನ್ಯೂಯಾರ್ಕ್ನಲ್ಲಿ ಜನಿಸಿದ್ದ ಲಿಯೊಟ್ಟಾ(Ray Liotta) ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ದಂಪತಿಯೋರ್ವರು ಲಿಯೊನ್ಸಾರನ್ನು ದತ್ತು ಪಡೆದಿದ್ದರು. ದೊಡ್ಡವರಾದ ನಂತರ ತಮ್ಮ ಮೂಲ ಪೋಷಕರು ಸ್ಕಾಟ್ ಲ್ಯಾಂಡ್ ನವರು ಎಂಬುದನ್ನು ಕಂಡುಕೊಂಡಿದ್ದರು. 1983ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಲಿಯೊಟ್ಟಾ ಇಲ್ಲಿಯವರೆಗೂ ಸಕ್ರೀಯವಾಗಿ ನಟಿಸುತ್ತಿದ್ದರು. ಲಿಯೊಟ್ಟಾ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಲಿಯೊಡ್ತಾ ನಿಧನಕ್ಕೆ ಹಾಲಿವುಡ್ ಸಂತಾಪ ಸೂಚಿಸಿದೆ. ಇದನ್ನೂ ಓದಿ : – ದಾವೋಸ್ ನಲ್ಲಿ ಕರ್ನಾಟಕ ದೊಡ್ಡ ಮಟ್ಟದಲ್ಲಿ ಆಕರ್ಷಣೆ ಮಾಡಿದೆ – ಸಿಎಂ ಬೊಮ್ಮಾಯಿ