ಹುಬ್ಬಳ್ಳಿ ಧಾರಾವಾಡದ ಸಿದ್ಧಾರೂಡ ರೈಲ್ವೇ ನಿಲ್ದಾಣ ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಂಸ್ಕೃತಿಕ ಹಾಗೂ ವಾಣಿಜ್ಯ ಚಟುವಟಿಕೆಯಿಂದ ಸದಾ ಸುದ್ದಿಯಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಈ ಬಾರಿ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಲ್ಲಿದೆ. ವಿಶ್ವದಲ್ಲಿಯೇ ಅತಿ ಉದ್ದನೆಯ ಪ್ಯಾಟ್ ಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಪಾತ್ರವಾಗಿದ್ದು, ಇದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಭಾರತೀಯ ನೈಋತ್ಯ ರೈಲ್ವೆ ವ್ಯಾಪ್ತಿಗೆ SWD ಬರುತ್ತದೆ. ಹೆಚ್ಚುತ್ತಿರುವ ಪುಯಾಣಿಕರ ಸಂಖ್ಯೆ ಪರಿಗಣಿಸಿ ಈಗಾಗಲೇ 5 ಪ್ಲಾಟ್ ಫಾರಂ ಹೊಂದಿದ್ದ ನಿಲ್ದಾಣದಲ್ಲಿ ಇನ್ನೂ 3 ಪ್ಲಾಟ್ ಫಾರಂ ನಿರ್ಮಿಸಲಾಗುತ್ತಿದೆ.
ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಂಕ್ಷನ್ ಆಗಿರುವ ಈ ನಿಲ್ದಾಣ, ದಕ್ಷಿಣದಲ್ಲಿ ಬೆಂಗಳೂರು, ಮೈಸೂರು ಹಾಗು ಉತ್ತರದಲ್ಲಿ ಪುಣೆ, ಮುಂಬೈ, ದೆಹಲಿಗೆ ಪ್ರಯಾಣಿಸುವವರಿಗೆ ಕೇಂದ್ರವಾಗಿದೆ. ಈ ರೈಲು ನಿಲ್ದಾಣ ಸದಾ ಪ್ರಯಾಣಿಕರಿಂದ ತುಂಬಿ ತುಳುಕುವ ಮುಖ್ಯವಾಗಿ 5 ಸ್ಮಾರ್ ರೇಟಿಂಗ್ ಪಡೆದ ಭಾರತದ 3 ರೈಲ್ವೆ ಕ್ಯಾಂಟೀನ್ ಗಳಲ್ಲಿ ಇದೂ ಒಂದು. ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆ ನೀಡುವ ಕ್ಯಾಂಟೀನ್ ಗಳಿಗೆ ಎಫ್ ಎಸ್ ಎಸ್ ಎ ಐ ನಿಂದ ಕೊಡುವ ರೇಟಿಂಗ್ ಇದಾಗಿದೆ. 5 ರೇಟಿಂಗ್ ಪಡೆದಿರುವುದು ರೈಲ್ವೇ ನಿಲ್ದಾಣದ ಗೌರವ ಹೆಚ್ಚಿಸಿದೆ. ಇದನ್ನೂ ಓದಿ : – RS ELECTION – ನಿರ್ಮಲಾ ಸೀತಾರಾಮನ್ ಗೆ 46 ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ
ಈ ರೈಲ್ವೆ ನಿಲ್ದಾಣದ ಹೊರನೋಟ ವಿಮಾನ ನಿಲ್ದಾಣಗಳಿಗೆ ಹೋಲಿಕೆಯಾಗುವಂತಿದೆ. ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ದಿನನಿತ್ಯ ಹಲವಾರು ರೈಲುಗಳ ಸಂಚಾರವಿದ್ದು, ಪುಯಾಣಿಕರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಅದಕ್ಕಾಗಿ ಎರಡು ಪ್ರವೇಶ ದ್ವಾರ ಹೊಂದಿದ ನಿಲ್ದಾಣಕ್ಕೆ ಮೂರನೆಯ ಪ್ರವೇಶ ದ್ವಾರವನ್ನು ಇತ್ತೀಚೆಗೆ ಕಲ್ಪಿಸಲಾಗಿದೆ. ಆಕರ್ಷಕವಾದ ದೊಡ್ಡದಾದ ಪುವೇಶ ದ್ವಾರ ಇದಾಗಿದ್ದು, ಹೆಚ್ಚಿನ ಜನ ಒಂದೇ ವೇಳೆಯಲ್ಲಿ ಓಡಾಡಲು ಇದು ಅನುಕೂಲ ಕಲ್ಪಿಸಿದೆ. ಅತೀ ಉದ್ದನೆಯ ಪ್ಲಾಟಫಾರಂ ಸೇರಿದಂತೆ ಒಟ್ಟು 8 ಪ್ಲಾಟಫಾರಂ, ವೇಟಿಂಗ್ ಕೊಠಡಿಗಳು, ಶೌಚಾಲಯಗಳೆಲ್ಲವನ್ನು ಪ್ರತಿನಿತ್ಯ ಶುಚಿಗೊಳಿಸುವುದು ಸವಾಲಿನ ಕೆಲಸವಾಗಿದ್ದರೂ ಕರ್ಮಚಾರಿಗಳು ಅತ್ಯಂತ ನಿಷ್ಠೆಯಿಂದ ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾಜ್ ಜೋಷಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : – RS ELECTION – ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ – ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್ ವಿಶ್ವಾಸ