ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಚದೂರ ತಹಸಲ್ ಕಚೇರಿಯ ನೌಕರ ರಾಹುಲ್ ಭಟ್ ಹತ್ಯೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರು ಬುದ್ಗಾಮ್ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದು,
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಕಾಶ್ಮೀರಿ ಪಂಡಿತ್ ನೌಕರರ ಸಂಘ ಕೂಡಾ ಅನಂತ್ ನಾಗ್ ನಲ್ಲಿ ಪ್ರತಿಭಟನೆ ನಡೆಸಿ, ಉಗ್ರರಿಂದ ಹತ್ಯೆಗೀಡಾದ ರಾಹುಲ್ ಭಟ್ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು.
ಇದನ್ನೂ ಓದಿ : – ಅಸಾನಿ ಚಂಡಮಾರುತ ಎಫೆಕ್ಟ್ – ಇನ್ನು 2 ದಿನಗಳ ಕಾಲ ಬೆಂಗಳೂರು ಕೂಲ್ ಕೂಲ್