ಪೊಲೀಸರಿಗೆ ಹೆದರಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಬಾಗೇಪಲ್ಲಿಯಲ್ಲಿ ನಡೆದಿದೆ.
ಘಟನೆಯಲ್ಲಿ ಬಾಗೇಪಲ್ಲಿಯ ಬೈರಾರೆಡ್ಡಿಗೆ ಕಾಲು ಮುರಿತವಾಗಿದೆ. ಮುಂಗಾನಹಳ್ಳಿ ಶ್ರೀಕಾಂತ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಂತಾಮಣಿ ಪೊಲೀಸರು ಬಾಗೇಪಲ್ಲಿ ರಸ್ತೆಯಲ್ಲಿ ತಪಾಸಣೆ ವೇಳೆ ಹೆದರಿ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಧರು ಪೊಲೀಸರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ : – ಅಸಾನಿ ಚಂಡಮಾರುತ ಎಫೆಕ್ಟ್ – ಇನ್ನು 2 ದಿನಗಳ ಕಾಲ ಬೆಂಗಳೂರು ಕೂಲ್ ಕೂಲ್
ಪ್ರತಿಭಟನೆಯಿಂದ ಚಿಂತಾಮಣಿ – ಬಾಗೇಪಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ತಪಾಸಣೆ ಹೆಸರಿನಲ್ಲಿ ವಾಹನ ಸವಾರರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ರಸ್ತೆಯಲ್ಲಿ ಪೊಲೀಸರು ತಪಾಸಣೆ ಹೆಸರಿನಲ್ಲಿ ಹಗಲು ದರೋಡೆ ಮಾಡಬೇಡಿ ಎಂದು 3 ಗಂಟೆಗಳ ಕಾಲ ರಸ್ತೆ ತಡೆಸಿ ಪ್ರತಿಭಟನೆ ನಡೆಸಿದ್ರು.
ಇದನ್ನೂ ಓದಿ : – ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನ