ತಿರುವನಂತಪುರ: ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿತ್ತು. ಈಗ ಈ ಹಾಡನ್ನಿಟ್ಟುಕೊಂಡು ಕೇರಳ ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಜನಜಾಗೃತಿಗಾಗಿ ರಾಸ್‍ಪುಟಿನ್ ಹಾಡನ್ನು ಕೇರಳ ಪೊಲೀಸರು ಬಳಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಫುಲ್ ಫೇಮಸ್ ಆಗುತ್ತಿದೆ. ಕೇರಳ ಪೊಲೀಸರ ಟ್ವಿಟರ್ ಅಕೌಂಟ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನ ಪಡೆದುಕೊಳ್ಳಿ. ಈ ಮೂಲಕ ಕೊರೊನಾ ಹರಡುವಿಕೆಯನ್ನ ನಾಶ ಮಾಡಿ. ಸಾಮಾನ್ಯ ಜೀವನಕ್ಕೆ ವಾಪಸ್ಸಾಗಿ ಎಂದು ವಿಡಿಯೋದ ಅಡಿಯಲ್ಲಿ ಬರೆಯಲಾಗಿದೆ. ಈ ವಿಡಿಯೋಗೆ ಸಾಕಷ್ಟು ಜನ ಪ್ರತಿಕ್ರಿಸಿದ್ದಾರೆ.
1978ರ ಫೇಮಸ್ ಸಾಂಗ್ ರಾಸ್‍ಪುಟಿನ್ ಬಿಟ್ಸ್‌ಗೆ ವೈದ್ಯಕೀಯ ವಿದ್ಯಾರ್ಥಿಗಳು ಅದ್ದೂರಿಯಾಗಿ ಡ್ಯಾನ್ಸ್ ಮಾಡಿದ್ದರು. ಇದಾದ ಬಳಿಕ ಹಲವರು ಈ ಹಾಡಿಗೆ ನೃತ್ಯ ಮಾಡಿದ್ದರು.