ಕಲಾವಿದನಾಗಿ ಜನಮನಸೂರೆಗೊಂಡಿರುವ ಕಿರಣ್ ರಾಜ್, ( KIRAN RAJ ) ಸಾಮಾಜಿಕ ಕಾರ್ಯಗಳ ಮೂಲಕ ಕೂಡ ಜನಪ್ರಿಯ. ಕೊರೋನ ( CORONA ) ಕಾಲದಲ್ಲಿ ಇವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು.
ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು.
ಮಕ್ಕಳಿಗೆ ಶಾಲೆ ಮುಖ್ಯ. ದಿನದ ಹೆಚ್ಚಿನ ಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಅಂತಹ ಶಾಲೆ ಉತ್ತಮ ವ್ಯವಸ್ಥೆಯಲ್ಲಿರಬೇಕು ಎಂಬ ಆಶಯದಿಂದ ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಟ್ಟಿದೆ ಕಿರಣ್ ರಾಜ್ ಫೌಂಡೇಶನ್. ಈ ಸಂಸ್ಥೆಯ ಸೇವೆಯನ್ನು ಕಂಡು ತಾವು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಕೆಲವು ಸ್ವಯಂಸೇವಕರು ಮುಂದೆ ಬಂದಿದ್ದಾರೆ.
ಇದನ್ನೂ ಓದಿ : – ವಿನೋದ್ ಪ್ರಭಾಕರ್ ಅಭಿನಯದ “ಲಂಕಾಸುರ” ಚಿತ್ರದ ಚಿತ್ರೀಕರಣ ಪೂರ್ಣ- ಸದ್ಯದಲ್ಲೇ ಟೀಸರ್ ಬಿಡುಗಡೆ