ತಮ್ಮ ಚಿತ್ರದಲ್ಲಿ ಅವಕಾಶ ಸಿಗಬೇಕಾದರೆ ಹೀರೊ ಜೊತೆ ಮಲಗು ಎಂದು ಖ್ಯಾತ ನಿರ್ಮಾಪಕ ಹೇಳಿದ್ದರು ಎಂದು ಕಿರುತೆರೆ ನಟಿ ಕಿಶ್ವರ್ ಮರ್ಚೆಂಟ್ ಹೇಳಿದ್ದಾರೆ.
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಸುದ್ದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸಯ್ಯಾಶ್ ರೈ ಅವರನ್ನು ವಿವಾಹವಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಿಶ್ವರ್ ಮರ್ಚೆಂಟ್, ದೊಡ್ಡ ಫಿಲ್ಮ್ ಮೇಕರ್ ಆಗಿ ಗುರುತಿಸಿಕೊಂಡಿರುವ ಅವರು ಹೀರೊ ಜೊತೆ ಮಲಗಿದರೆ ತಮ್ಮ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ನಾನು ಆ ಆಹ್ವಾನವನ್ನು ನಯವಾಗಿ ತಿರಸ್ಕರಿಸಿ ಚಿತ್ರದಿಂದ ಹೊರಬಂದೆ ಎಂದಿದ್ದಾರೆ.
ಚಿತ್ರದಲ್ಲಿ ನಟಿಸುವಾಗ ನನ್ನ ಜೊತೆ ತಾಯಿ ಇರುತ್ತಿದ್ದರು. ಒಂದು ಬಾರಿ ನನಗೂ ಇಂತಹ (ಕಾಸ್ಟಿಂಗ್ ಕೌಚ್) ಅನುಭವ ಆಗಿದೆ. ಒಂದು ಬಾರಿ ಮಾತುಕತೆಗೆ ಹೋದಾಗ ಈ ಆಹ್ವಾನ ಬಂತು. ಆದರೆ ನಾನು ಮತ್ತೆ ಹೋಗಲಿಲ್ಲ ಎಂದು ಅವರು ವಿವರಿಸಿದರು.
ಈ ತರಹ ಸಿನಿಮಾದ ಕಡೆ ನಡೆಯುತ್ತೆ ಎಂದು ಹೇಳಲ್ಲ. ಅದೊಂದು ಸಾಮಾನ್ಯ ಸಂಗತಿ ಆಗಿದೆ. ಬಾಲಿವುಡ್ ಗಬ್ಬೇದು ಹೋಗಿದೆ. ಆದರೆ ಇದು ಎಲ್ಲಾ ಕಡೆ ಇದೆ ಎಂದು ಕಿಶ್ವರ್ ಹೇಳಿದರು.
ದೆಸ್ ಮೆ ನಿಕ್ಲಾ ಹುವಾ ಚಾಂದ್, ಕಾವ್ಯಾಂಜಲಿ, ಏಕ್ ಹಸಿನಾ ಥಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ತ್ರಗಳಲ್ಲಿ ನಟಿಸಿದ್ದು, ಕಾನ್ ಹಮ್, ಕಹಾನ್ ಥು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.