ಯುವಕನೊಬ್ಬ ಅಕ್ಕ ತಂಗಿಯರನ್ನು ಒಂದೇ ಮಹೂರ್ತದಲ್ಲಿ ಮದುವೆಯಾದ ಅಪರೂಪದ ಘಟನೆ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ನಡೆದಿದೆ.
ಸುಪ್ರಿಯಾ ಹಾಗೂ ಲಲಿತಾ ಎಂಬ ಸೋದರಿಯನ್ನು ಉಮಾಪತಿ ಎಂಬಾತ ವರಿಸಿದ್ದಾನೆ. ತಂಗಿಯನ್ನು ಇಷ್ಟಪಟ್ಟಿದ್ದರೂ ಮಾತು ಬಾರದ ಅಕ್ಕನನ್ನು ವರಿಸಿ ಯುವಕ ತಂಗಿಯ ಮಾತನ್ನು ಈಡೇರಿಸಿದ್ದಾನೆ.
ಅಕ್ಕ ಸುಪ್ರಿಯಾಗೆ ಮಾತು ಬರುತ್ತಿರಲಿಲ್ಲ. ಆದ್ದರಿಂದ ತಂಗಿಯನ್ನು ಮದುವೆ ಆಗಲು ಒಪ್ಪಿದ್ದಾನೆ. ತಾನು ಮದುವೆ ಆದರೆ ಅಕ್ಕನನ್ನು ಯಾರು ಮದುವೆ ಆಗುವುದಿಲ್ಲ ಎಂದು
ಹೆದರಿದ ಲಲಿತಾ, ಅಕ್ಕನನ್ನು ಮದುವೆ ಆಗುವುದಾದರೆ ಮಾತ್ರ ಮದುವೆಗೆ ಒಪ್ಪುವುದಾಗಿ ಪಟ್ಟು ಹಿಡಿದಿದ್ದಾಳೆ.
ಲಲಿತಾಳ ಷರತ್ತಿಗೆ ಒಪ್ಪಿದ ಉಮಾಪತಿ ಮೇ 7 ರಂದು ಗುರು ಹಿರಿಯರ ಸಮ್ಮುಖದಲ್ಲಿ ಅಕ್ಕ ತಂಗಿಯರಿಬ್ಬರನ್ನು ಕೂಡ ಒಂದೇ ಮಹೂರ್ತದಲ್ಲಿ ವರಿಸಿದ್ದಾನೆ. ಈ ಜೋಡಿಗಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ನೋಡಿದ ಮಂದಿ ಅಚ್ಚರಿ ಪಟ್ಟು ಮಧು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ವಿಶೇಷ ಅಂದರೆ ಸುಪ್ರಿಯಾ ಮತ್ತು ಲಲಿತಾ ಕುಟುಂಬದಲ್ಲಿ ಈ ತರ ಮದುವೆ ನಡೆದಿದ್ದು, ಇದೇನು ಮೊದಲಲ್ಲ, ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವವರು ಮದುವೆಯಾಗಿದ್ದರು.