ಜಮ್ಮು ಕಾಶ್ಮೀರ: ಚಿರತೆ ದಾಳಿಗೆ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ಗಾಂಧಿನಗರದ ಗ್ರೀನ್ ಬೆಲ್ಟ್ ಉದ್ಯಾನವನದಲ್ಲಿ ಏಕಾಏಕಿ ವ್ಯಕ್ತಿ ಮೇಲೆ ಚಿರತೆ ಎರಗಿದೆ.
ತಕ್ಷಣ ವ್ಯಕ್ತಿಯ ಸಹಾಯಕ್ಕೆ ಇನ್ನೋರ್ವ ವ್ಯಕ್ತಿ ಬಂದಿದ್ದು ದೊಣ್ಣೆಯಿಂದ ಚಿರತೆಗೆ ಹೊಡೆದು ಓಡಿಸಲು ಪ್ರಯತ್ನಿಸಿದ್ದಾನೆ. ಕೂಡಲೆ ಚಿರತೆ ವ್ಯಕ್ತಿಯನ್ನು ಬಿಟ್ಟು ಓಡಿದ್ದು, ಇತ್ತ ಇಬ್ಬರು ವ್ಯಕ್ತಿಗಳು ಪ್ರಾಣ ಉಳಿಸಿಕೊಳ್ಳಲು ವಾಹನ ಹತ್ತುವ ದೃಶ್ಯಗಳು ವೈರಲ್ ಆಗಿದೆ.
ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತು ಪಾರ್ಕ್ ಆಡಳಿತ ಮಂಡಳಿ ತನಿಖೆಗೆ ಆದೇಶಿದೆ.