ಹುಚ್ಚುನಾಯಿ (Maddog) ದಾಳಿಗೆ 7 ಮಂದಿಗೆ ಗಾಯವಾಗಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಕುಷ್ಟಗಿಯ ವಿದ್ಯಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ.
ಇಬ್ಬರು ಯುವಕರು ಸೇರಿದಂತೆ ಏಳು ಜನರ ಮೇಲೆ ದಾಳಿ ಮಾಡಿದೆ. ಗಾಯಾಳುಗಳು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಗಾಯಗೊಂಡಿರುವ ಒಬ್ಬ ವೃದ್ದನನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆಡೆ ಕಳಿಸಿದ್ದಾರೆ. ಹುಚ್ಚುನಾಯಿ ಪತ್ತೆ ಹಚ್ಚುವಂತೆ ಜನರು ಒತ್ತಾಯಿಸಿದ್ದಾರೆ. ಇದನ್ನೂ ಓದಿ : – ತುಮಕೂರಿನಲ್ಲಿ ಡಿಎಸ್ಎಸ್ ಮುಖಂಡನ ಬರ್ಬರ ಹತ್ಯೆ