ನೂತನ ನೋಟುಗಳಿಂದ ಮಹಾತ್ಮಾ ಗಾಂಧಿ ಚಿತ್ರ ತೆರವು ಮಾಡುವ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ. ಈ ಕುರಿತ ಸುದ್ದಿಗಳು ಸುಳ್ಳು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
![](https://rajnewskannada.in/wp-content/uploads/2022/06/image-71.png)
ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿಐ, ನೂತನ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಇತರೆ ಭಾವಚಿತ್ರಗಳೊಂದಿಗೆ ಬದಲಾಯಿಸುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ.. ಎಂದಿನಂತೆ ನೂತನ ನೋಟುಗಳಲ್ಲಿಯೂ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ ಎಂದು ಹೇಳಿದೆ.
![](https://rajnewskannada.in/wp-content/uploads/2022/06/image-72-1024x576.png)
ಈ ಹಿಂದೆ ಭಾರತೀಯ ನೋಟುಗಳಲ್ಲಿ ಗಾಂಧಿ ಚಿತ್ರವನ್ನು ತೆಗೆದು ಅವರ ಬದಲಿಗೆ ರವೀಂದ್ರನಾಥ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಇತರ ಪ್ರಮುಖ ಭಾರತೀಯರ ಚಿತ್ರಗಳನ್ನು ಸೇರಿಸಬಹುದು ಎಂದು ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಆರ್ ಬಿ ಐ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!