ಪಂಜಾಬ್: ಪಂಜಾಬ್ನಲ್ಲಿ ಇನ್ನುಮುಂದೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದಾರೆ. ಈ ಬಗ್ಗೆ ಪಂಜಾಬ್ ಸರ್ಕಾರ ಮಹತ್ವದ ಘೋಷಣೆಯನ್ನು ಮಾಡಿದೆ.
ಇಂದಿನಿಂದ ಜಾರಿಗೆ ಬರುವಂತೆ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಲಾಗಿದೆ. ರಾಜ್ಯದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಪಂಜಾಬ್ ರಸ್ತೆ ಸಾರಿಗೆ ನಿಗಮ, ಪಂಜಾಬ್ ರಸ್ತೆ ಮಾರ್ಗದ ಬಸ್ಗಳು ಸೇರಿದಂತೆ ನಗರ ಸಾರಿಗೆಯಲ್ಲಿ ಮಹಿಳೆಯರು ಇಂದಿನಿಂದ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಆದರೆ ಇದು ಎಸಿ ಬಸ್ ಮತ್ತು ವೋಲ್ವೋ ಬಸ್ಗಳಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಪಂಜಾಬ್ ನಿವಾಸಿಗಳೆಂದು ದೃಢೀಕರಿಸುವ ಯಾವುದೇ ಒಂದು ದಾಖಲೆಯನ್ನು ಮಹಿಳೆಯರು ನೀಡಬೇಕಾಗುತ್ತದೆ.
ಬಸ್ ದರದ ಹೊರೆಯ ಕಾರಣದಿಂದ ಶಾಲೆ ಬಿಡುವ ಮಕ್ಕಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸರ್ಕಾರದ ನೂತನ ಯೋಜನೆಗೆ ಸಾಕಷ್ಟು ಪ್ರಶಂಸೆಗಳು ಬರುತ್ತಿವೆ.