ಬ್ರೆಡ್ ಟೋಸ್ಟ್ ಮಾಡುವುದು ಅತೀ ಸುಲಭ . ಇದು ಮಕ್ಕಳಿಗೆ ತುಂಬಾ ಇಷ್ಟ. ಅದರಂತೆ ಮೊಟ್ಟೆಯನ್ನು ಬಳಸಿ ಬ್ರೆಡ್ ಟೋಸ್ಟ್ ಮಾಡಿದರೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮಕ್ಕಳು ಮತ್ತು ಮನೆಯರು ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗಿರುವ ಪದಾರ್ಥಗಳು
ಬ್ರೆಡ್ – 2 ಪೀಸ್
ಮೊಟ್ಟೆ – 1
ಕಟ್ ಮಾಡಿದ ಈರುಳ್ಳಿ – ಅರ್ಧ ಕಪ್
ಹಸಿ ಮೆಣಸಿನಕಾಯಿ – 1
ಕಟ್ ಮಾಡಿದ ಟೊಮೆಟೊ – ಅರ್ಧ ಕಪ್at
ಅರಿಶಿಣ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ಕರದ ಪುಡಿ – 1 ಟೀಸ್ಪೂನ್
ತುರಿದ ಚೀಸ್ – ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :-
ಒಂದು ಬಟಲಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಅರಿಶಿಣ ಮತ್ತು ಉಪ್ಪು ಹಾಕಿ ಕಳಸಿ. ನಂತರ ಮೊಟ್ಟೆಯನ್ನು ಒಡೆದು ಮಿಶ್ರಣಕ್ಕೆ ಸೇರಿಸಿ. ಪ್ಯಾನ್ ಬಿಸಿ ಮಾಡಿ ಅದಕ್ಕೆ ಮೊಟ್ಟೆ ಮಿಶ್ರಣವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಅದರ ಮೇಲೆ ಬ್ರೆಡ್ ಇಟ್ಟು ಬಿಸಿ ಮಾಡಿ. ಎರಡುಕಡೆ ಚೆನ್ನಾಗಿ ಬಿಸಿ ಮಾಡಿ. ಹೆಚ್ಚು ರೋಸ್ಟ್ ಆಗದಂತೆ ನೋಡಿಕೊಳ್ಳಿ. ನಂತರ ಬ್ರೆಡ್ಗೆ ಚೀಸ್ ಹಾಕಿ ಬಿಸಿ ಮಾಡಿದರೆ ಬಿಸಿ ಬಿಸಿಯಾದ ಬ್ರೆಡ್ ಟೋಸ್ಟ್ ಸವಿಯಲು ಸಿದ್ದವಾಗಿದೆ.
ಇದನ್ನೂ ಓದಿ :- ಮಕ್ಕಳು ಮನೆಯಲ್ಲಿ ಮಾಡಿದ ದೋಸೆ ತಿನ್ತಿಲ್ವಾ..? ಹಾಗಿದ್ರೆ ಮೊಟ್ಟೆ ದೋಸೆ ಒಮ್ಮೆ ಟ್ರೈ ಮಾಡಿ