ಸಿಂಪಲ್ ಆಗಿ ಚಿಕನ್ ಗ್ರೇವಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ..

ದಿನಾ ವೆಜ್ ತಿಂದು ಬೇಜಾರಾದ್ರೆ ಸಿಂಪಲ್ ಆಗಿ ಈ ರೀತಿ ಚಿಕನ್ ಗ್ರೇವಿ ಮಾಡಿ. ಚಿಕನ್ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು.

Tabili chicken gravy recipe by Meera Ansari at BetterButter


ಚಿಕನ್ – ಅರ್ಧ ಕೆಜಿ, ಒಣಗಿದ ಮೆಣಸಿನಕಾಯಿ – 8-10, ಈರುಳ್ಳಿ – 2, ಟೊಮೆಟೊ – 2 ಕೊತ್ತಂಬರಿ ಸೊಪ್ಪು- ಸ್ವಲ್ಪ ಅರಿಸಿನ- ಸ್ವಲ್ಪ ಎಣ್ಣೆ – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಅಚ್ಚ ಖಾರದ ಪುಡಿ- 1 ಚಮಚ, ದನಿಯಾ ಪುಡಿ – 1 ಚಮಚ, ಗರಂಮಸಾಲ – 1 ಚಮಚ, ಕಸೂರಿ ಮೇಥಿ – 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ರೆಡಿ ಮಾಡಿ ಇಟ್ಟುಕೊಳ್ಳಿ. ಇದನ್ನೂ ಓದಿ : – ಈ ರೀತಿಯಾಗಿ ಮೊಟ್ಟೆ ಬಿರಿಯಾನಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ

EASY RESTAURANT STYLE CHICKEN GRAVY / CHICKEN CURRY | bharatzkitchen


ಮಾಡುವ ವಿಧಾನ…
ಮೊದಲು ಒಣಗಿದ ಮೆಣಸಿನ ಕಾಯಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ನೆನೆದ ಒಣಮೆಣಸಿನಕಾಯಿ ಟೊಮೆಟೊವನ್ನ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬೇಕಿದ್ರೆ ಗೋಡಂಬಿ ಸೇರಿಸಿಕೊಳ್ಳಿ.

Hyderabadi Chicken Gravy | Chicken Curry Hyderabadi Style - Spice Eats


ಬಾಣಲೆಯನ್ನು ಒಲೆಯ ಮೇಲಿಟ್ಟು ಬಿಸಿಯಾದ ಬಳಿಕ 2 ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಿ. ಬಳಿಕ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಸಿನ, ಉಪ್ಪು, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ. ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ. ಅರ್ಧ ಲೋಟ ನೀರು ಸೇರಿಸಿ 4 ನಿಮಿಷ ಕುದಿಸಿಕೊಂಡರೆ ರುಚಿಕರವಾದ ಚಿಕನ್ ಗ್ರೇವಿ ಸವಿಯಲು ಸಿದ್ಧ. ಕೊನೆಯಲ್ಲಿ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಕಿ.

ಇದನ್ನೂ ಓದಿ : – ಚಳಿಗೆ ಮಟನ್ ಕಾಲು ಸೂಪ್ ಕುಡಿಬೇಕು ಅನ್ಸುತ್ತಾ…? ಈ ರೆಸಿಪಿ ನೋಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!