ಈ ರೀತಿಯಾಗಿ ಮೊಟ್ಟೆ ಬಿರಿಯಾನಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ

ನಾನ್ ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ.

Egg Biryani Recipe (Instant Pot & Stovetop) - Pavanis Kitchen

ನಾನ್ ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ ಅದರ ರುಚಿ ಸವಿದು ಎಂಜಾಯ್ ಮಾಡಿ.

Egg Biryani Recipe | how to make egg biryani in cooker & dum style

ಮೊದಲಿಗೆ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ತಿಳಿದುಕೊಳ್ಳೋಣ
ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋ ಹಾಕಿ ಕೆಂಪಗೆ ಹುರಿದುಕೊಳ್ಳಿ. ತದನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ.

Egg Dum Biryani | Hyderabadi Egg Biryani Recipe - YouTube


ಇದಕ್ಕೂ ಮೊದಲು ನಿಮಗೆಷ್ಟು ಬೇಕು ಅಷ್ಟು ಮೊಟ್ಟೆಯನ್ನ ಬೇಯಿಸಿಕೊಳ್ಳಿ. ಬಳಿಕ ಮೊಟ್ಟೆ ಸುಲಿದು ಅರ್ಧ ಸ್ಪೂನ್ ಅರಿಶಿನ , ಉಪ್ಪು, ಖಾರಪುಡಿ ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ನಂತರ ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಳ್ಳಿ. ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ. ಇನ್ಯಾಕೆ ತಡ ಬೇಗನೆ ಮೊಟ್ಟೆ ಬಿರುಯಾನಿ ರೆಡಿ ಮಾಡಿ ಮನೆ ಮಂದಿಯಲ್ಲ ಸವಿಯಿರಿ.

ಇದನ್ನೂ ಓದಿ : – ಚಳಿಗೆ ಮಟನ್ ಕಾಲು ಸೂಪ್ ಕುಡಿಬೇಕು ಅನ್ಸುತ್ತಾ…? ಈ ರೆಸಿಪಿ ನೋಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!