ಯುರೋಪ್, ಆಫ್ರಿಕಾ ಹಾಗೂ ಏಷ್ಯಾ ರಾಷ್ಟ್ರಗಳಲ್ಲಿ ಕೊರೊನಾ (CORONA) ವೈರಸ್ನ ಹೊಸ ರೂಪಾಂತರಿ ಸ್ಫೋಟಗೊಂಡಿದೆ. ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ ಕೆಲವು ವಾರಗಳಿಂದ ಈ ಪ್ರಮಾಣ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ (SOUDHI AREBIA) ದೇಶವು ಭಾರತ ಸೇರಿದಂತೆ 16 ದೇಶಗಳಿಗೆ ತನ್ನ ಪ್ರಜೆಗಳ ಪ್ರಯಾಣದ ಮೇಲೆ ನಿರ್ಬಂಧ ಹೇರಿದೆ.
ಭಾರತ, ಲೆಬೆನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮನ್, ಸೋಮಾಲಿಯಾ, ಇಥಿಯೋಪಿಯಾ, ಕಾಂಗೋ, ಲಿಬಿಯಾ, ಇಂಡೋನೇಷ್ಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಹಾಗೂ ವೆನೆಜುವೆಲಾ ದೇಶಗಳಿಗೆ ತೆರಳದಂತೆ ಸೌದಿ ಅರೇಬಿಯಾ ದೇಶವು ತನ್ನ ಪ್ರಜೆಗಳಿಗೆ ನಿರ್ಬಂಧ ವಿಧಿಸಿದೆ.
ಸೌದಿ ಅರೇಬಿಯಾ ದೇಶದಲ್ಲಿ ಮಂಕಿ ಪಾಕ್ಸ್ನ ಪ್ರಕರಣ ಕೂಡಾ ಕಂಡು ಬಂದಿಲ್ಲ ಎಂದು ಸೌದಿ ಅರೇಬಿಯಾ ಸರ್ಕಾರದ ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಮಂಕಿ ಪಾಕ್ಸ್ (Monkey fox) ವೈರಾಣು 50 ವರ್ಷಗಳ ಹಿಂದೆ ಆಫ್ರಿಕಾದ ಕಾಂಗೋ ದೇಶದಲ್ಲಿ ಪತ್ತೆಯಾಗಿತ್ತು. ಇದೀಗ ಈ ವೈರಾಣುವಿನ ಸೋಂಕು ಆಫ್ರಿಕಾ ದಾಟಿ ಐರೋಪ್ಯ ದೇಶಗಳಲ್ಲೂ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಕೂಡಾ ಕಟ್ಟೆಚ್ಚರ ವಹಿಸಿದೆ.
ಇದನ್ನೂ ಓದಿ :- ಇಂದಿನಿಂದ ಕ್ವಾಡ್ ಶೃಂಗಸಭೆ- ಟೋಕಿಯೋದಲ್ಲಿ ಮೋದಿಗೆ ಆತ್ಮೀಯ ಸ್ವಾಗತ