ಸೀಮೆಎಣ್ಣೆ ಕುಡಿದರೆ ಕೊರೊನಾ ವೈರಸ್ ಬರಲ್ಲ ಎಂಬ ಸ್ನೇಹಿತ ಸಲಹೆ ಮೇರೆಗೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಸೀಮೆಎಣ್ಣೆ ಕುಸಿದು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ಅಶೋಕ ಗಾರ್ಡನ್ ಪ್ರದೇಶದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಮಹೇಂದರ್ ಎಂಬ ವ್ಯಕ್ತಿ ಸೀಮೆ ಎಣ್ಣೆ ಕುಡಿದು ಮೃತಪಟ್ಟಿದ್ದು, ಪೋಸ್ಟ್ ಮಾರ್ಟಂ ವೇಳೆ ಕೊರೊನಾ ನೆಗೆಟಿವ್ ವರದಿ ಬಂದಿದೆ.
ಜ್ವರದಿಂದ ಬಳಲುತ್ತಿದ್ದ ಮಹೇಂದರ್ ಕೊರೊನಾವೈರಸ್ ತಗುಲಿರಬಹುದು ಎಂದು ಆತಂಕ ಉಂಟಾಗಿದೆ. ಇದರಿಂದ ಸ್ನೇಹಿತನ ಬಳಿ ಹೇಳಿಕೊಂಡಾಗ ಕೋವಿಡ್ ಗೆ ಸೀಮೆಎಣ್ಣೆ ಮದ್ದು ಎಂದು ಸಲಹೆ ನೀಡಿದ್ದಾನೆ. ಸೀಮೆಎಣ್ಣೆ ಕುಡಿದ ಕೂಡಲೇ ಮಹೇಂದರ್ ಸ್ಥಿತಿ ಚಿಂತಾಜನಕವಾಗಿದೆ.
ಮಹೇಂದರ್ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ನಡೆದ ಪೋಸ್ಟ್ ಮಾರ್ಟಂ ನಲ್ಲಿ ಮಹೇಂದರ್ ಸೀಮೆಎಣ್ಣೆ ಕುಡಿದಿದ್ದರಿಂದ ಮೃತಪಟ್ಟಿದ್ದು, ಕೋವಿಡ್ ನೆಗೆಟಿವ್ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.