ಗೀತಾ ಗೋವಿಂದಂ ಚಿತ್ರದ ಸ್ಫೂರ್ತಿ ಪಡೆದು ಬಸ್ ನಲ್ಲಿ ಅಪರಿಚಿತ ಯುವತಿಗೆ ಮುತ್ತಿಟ್ಟಿದ್ದ ಯುವಕನನ್ನು ಕೊನೆಗೂ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ ಇಂಜಿನಿಯರಿಂಗ್ ಯುವಕ ಮಧುಸೂದನ್ ರೆಡ್ಡಿ (25) ಇದೀಗ ಬೆಂಗಳೂರಿನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನ ಟಿ.ದಾಸರಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಗೆ ಮುತ್ತಿಟ್ಟಿದ್ದ ಮಧುಸೂದನ್ ವಿರುದ್ಧ ಯುವತಿ ಪೀಣ್ಯ ಪೊಲೀಸರಿಗೆ ಮಾನಹಾನಿ ದೂರು ನೀಡಿದ್ದರು.
ಸೆಕ್ಷನ್ 354A, 354ರ ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿದ್ದ ಪೊಲೀಸರು ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.
ಬಳ್ಳಾರಿಯಿಂದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಯುವಕ-ಯುವತಿ ಪ್ರಯಾಣಿಸಿದ್ದರು. ಗೀತಾ ಗೋವಿಂದಂ ಸಿನಿಮಾ ನೋಡಿ ಬಂದಿದ್ದ ಯುವಕ ಅದೇ ಗುಂಗಿನಲ್ಲಿ ಯುವತಿಗೆ ಮುತ್ತಿಟ್ಟಿದ್ದ
ಗೌರಿ-ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಯುವತಿ ಘಟನೆಯಿಂದ ಕಿರುಚಿಕೊಂಡಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಹಿಡಿಯಲು ಹೋದಾಗ ತಪ್ಪಿಸಿಕೊಂಡಿದ್ದ. ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.