ತೌಕ್ತೆ ಚಂಡಮಾರುತದ ಪರಿಣಾಮ ಪ್ರಕ್ಷುಬ್ದಗೊಂಡ ಸಮುದ್ರದಲ್ಲಿ ದೋಣಿ ಮುಳುಗಿದ್ದರಿಂದ ಇಬ್ಬರು ಮೀನುಗಾರರು ಸತತ 8 ಗಂಟೆ ಈಜಿ ಸುರಕ್ಷಿತವಾಗಿ ದಡ ಸೇರಿದರೆ ಉಳಿದ 12 ಮಂದಿಗಾಗಿ ಶೋಧ ಕಾರ್ಯ ನಡೆದಿದೆ.
ಅಲಾಯನ್ಸ್ ಎಂಬ ಟಗ್ ದೋಣಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಮಂಗಳೂರು ಮತ್ತು ಉಡುಪಿ ನಡುವಿನ ಕಂಡ ಮಟ್ಟು ಕೊಪ್ಪದ ಸಮೀಪ ಮಗುಚಿದೆ. ಇದೇ ವೇಳೆ ಮಂಗಳೂರು ಸಮೀಪ ಮತ್ತೊಂದು ಟಗ್ ಬೋಟ್ ಕೂಡ ನಾಪತ್ತೆಯಾಗಿದ್ದು ಪಟ್ಟಾರೆ 17 ಮಂದಿ ನಾಪತ್ತೆಯಾಗಿದ್ದಾರೆ.
ಮೊಮಿರುಲ್ ಮುಲ್ಲಾ (34) ಮತ್ತು ಕರೀಮುಲ್ಲಾ ಶೇಖ್ (24) ಟ್ಯೂಬ್ ಬಳಸಿ ಸತತ 8 ಗಂಟೆ ಈಜಿ ಕಂಡ ಮಟ್ಟು ಕೊಪ್ಪದ ದಡ ಸಮೀಪ ಬಂದಿದ್ದು, ಸ್ಥಳೀಯರು ಇವರನ್ನು ಗಮನಿಸಿ ರಕ್ಷಿಸಿದ್ದಾರೆ.
ಎಂಆರ್ ಪಿಎಲ್ ಗೆ ಸೇರಿದ ದೋಣಿಗಳು ಇವು ಎನ್ನಲಾಗಿದೆ. ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.