ಮಂಗಳೂರು : ಕೋವಿಡ್ ಸಮನ್ವಯ ಹೆಲ್ಪ್‌ಲೈನ್ ವತಿಯಿಂದ ಮಂಗಳೂರು ನಗರದ 80 ಮಂಗಳಮುಖಿಯರಿಗೆ ದಿನಸಿ ಕಿಟ್ನ್ನು ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ವಿತರಿಸಲಾಯಿತು.
ತಲಾ 10 ಕೆಜಿ ಅಕ್ಕಿಯೊಂದಿಗೆ ಹಲವು ರೀತಿಯ ದಿನಸಿ ಸಾಮಗ್ರಿಗಳೊಂದಿಗೆ ದಿನಸಿ ಕಿಟ್ನ್ನು ಪ್ರಾಯೋಜಿಸಿದ ಕಾರ್‌ಸ್ಟ್ರೀಟ್‌ನ ಅರುಣ್ ವಿಜಯೇಂದ್ರ ಭಟ್ ಎಂಬುವವರನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮಂಗಳೂರು ನಗರದ ಮಂಗಳಮುಖಿಯರು ಸಂಕಷ್ಟದಲ್ಲಿದ್ದು ಸಹಕರಿಸುವಂತೆ ಕೋರಿಕೊಂಡ ಮೇರೆಗೆ ಈ ದಿನಸಿ ಕಿಟ್ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್‌ಸ್ಟ್ರೀಟ್‌ನ ಅರುಣ್ ವಿಜಯೇಂದ್ರ ಭಟ್ ಎಂಬವರು ಈ ಆಹಾರ ಕಿಟ್‌ಗಳನ್ನು ಪ್ರಾಯೋಜಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಎ. ಗಾಂವ್ಕರ್, ಎಸಿಪಿಗಳಾದ ಎಸ್. ಮಹೇಶ್ ಕುಮಾರ್, ನಟರಾಜ್, ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐ ರಾಜೇಂದ್ರ ಬಿ. ಮತ್ತು ಸಿಸಿಬಿ ಸಿಬ್ಬಂದಿ ಉಪಸ್ಥಿತರಿದ್ದರು.