ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಳ್ಳಿ ಜಲಾಶಯ (markonahalli dam )ತುಂಬಿ ತುಳುಕುತ್ತಿದೆ. ಜಲಾಶಯದ ಗರಿಷ್ಠ ಮಟ್ಟ ೮೮.೫ ಅಡಿಗೆ ಭರ್ತಿಯಾಗಿದೆ.
![](https://rajnewskannada.in/wp-content/uploads/2022/05/rain-1.png)
ಶಿಂಷಾ ನದಿಗೆ (shimsha river ) ಅಡ್ಡಲಾಗಿ ಮಾರ್ಕೋನಹಳ್ಳಿ ಬಳಿ ಜಲಾಶಯ ನಿರ್ಮಿಸಲಾಗಿದೆ . ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದಿರುವ ಕಾರಣ ಜಲಾಶಯ ಭರ್ತಿಯಾಗಿದೆ .2 ಸಾವಿರ ಕ್ಯೂಸೆಕ್ ಒಳ ಹರಿವು , 2 ಸಾವಿರ ಕ್ಯೂಸೆಕ್ ಹೊರಹರಿವು ಇದೆ. ಡ್ಯಾಂ ಭರ್ತಿಯಾಗಿ ಆಟೋಮ್ಯಾಟಿಕ್ ಸೈಫನ್ ಮೂಲಕ ನದಿಗೆ ನೀರು ಬಿಡಲಾಗಿದೆ.
![](https://rajnewskannada.in/wp-content/uploads/2022/05/rain-2.png)
ಜಲಾಶಯದ ಕೆಳ ಭಾಗದ ಶಿಂಷಾ ನದಿಯ ಆಸುಪಾಸಿನ ಮಂದಿ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ. ಜನ – ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಇದನ್ನೂ ಓದಿ : – ಸಾವಿರದ ಗಡಿ ದಾಟಿದ ಅಡುಗೆ ಅನಿಲ ಬೆಲೆ – ಇಂದು ಮತ್ತೆ ಮೂರುವರೆ ರೂಪಾಯಿ ಹೆಚ್ಚಳ