ಚಾಮರಾಜಪೇಟೆಯಲ್ಲಿರೋ ಈದ್ಗಾ ಮೈದಾನ ವಿವಾದ ಕುರಿತಂತೆ ಹಿಂದೂ ಸಂಘಟನೆಗಳ ಒತ್ತಡಕ್ಕೆ ಪಾಲಿಕೆ ಮಣಿದಿದೆ. ಚಾಮರಾಜಪೇಟೆಯಲ್ಲಿರುವ ಮೈದಾನ ಬಿಬಿಎಂಪಿ (BBMP) ಪ್ರಾಪರ್ಟಿ. ವರ್ಷದಲ್ಲಿ 2 ದಿನ ಹೊರತು ಪಡಿಸಿ ಇತರರಿಗೂ ಸಮಾರಂಭಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ.
ಪಾಲಿಕೆ ಅನುಮತಿ ಪಡೆದು ಸಮಾರಂಭ ನಡೆಸಲು ತೀರ್ಮಾನ ಮಾಡಲಾಗಿದೆ. ಮೈದಾನ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಸುಪರ್ದಿಯಲ್ಲಿದೆ. ಅವರ ಅನುಮತಿ ಪಡೆದು ಸಮಾರಂಭಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹಿಂದೂಗಳಿಗೂ ಅವಕಾಶ ಕೊಡಿ ಅಂತಾ ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿಂದೆ ಮುಸಲ್ಮಾನರಿಗೆ ಮಾತ್ರ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. ಇದನ್ನು ಓದಿ :- ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ
ಗ್ಯಾಸ್ ತಯಾರಿಕೆಗೆ ತ್ಯಾಜ್ಯ ಬಳಕೆಗೆ ನಿರ್ಧಾರ
ಬೆಂಗಳೂರು ನಗರದಲ್ಲಿ ವೆಸ್ಟ್ ಮ್ಯಾನೇಜ್ ಮೆಂಟ್ ಕಂಪನಿ 6 ತಿಂಗಳಿಂದ ನಡೆಯುತ್ತಿದೆ.
ಕಸ ಸಂಗ್ರಹಣೆ ಹಾಗೂ ಸಾಗಾಣಿಕೆ ಚಟುವಟಿಕೆ, ಕಸ ಸಂಸ್ಕರಣೆಯನ್ನ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ಯಾಸ್ ತಯಾರಿಕೆಗೆ ತ್ಯಾಜ್ಯ ಬಳಕೆಗೆ ನಿರ್ಧಾರ ಮಾಡಲಾಗಿದ್ದು 198 ವಾರ್ಡ್ ಗಳಲ್ಲೂ ಕಸದ ಟೆಂಡರ್ ಮಾಡಲು ತೀರ್ಮಾನ ಮಾಡಲಾಗಿದೆ. ಕಸದ ಗುತ್ತಿಗೆ ವಿಚಾರ ಇನ್ಮುಂದೆ ಪಾಲಿಕೆ ಮೇಲ್ವಿಚಾರಣೆ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಾಗಿ ಕಂಪನಿ ಮೂಲಕ ಮೇಲ್ವಿಚಾರಣೆ ಆಗಲಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ :- ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ
ಪ್ಲಾಸ್ಟಿಕ್ ನಿಷೇಧ ಕುರಿತಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು.
ದಿನವೊಂದಕ್ಕೆ ಪ್ರತಿ 8 ವಲಯಗಳಲ್ಲೂ ಪ್ಲಾಸ್ಟಿಕ್ ನಿಷೇಧ ಜಾಗೃತಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯ ಬೆಂಗಳೂರಿನ 9482 ರಸ್ತೆ ಗುಂಡಿಗಳನ್ನ ಮುಚ್ಚಲಾಗಿದೆ. ಇನ್ನೂ 2020 ರಸ್ತೆ ಗುಂಡಿಗಳು ಮುಚ್ಚುವುದು ಬಾಕಿ ಇದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದ್ರು. ರಸ್ತೆ ಗುಂಡಿ ಮುಚ್ಚಬೇಕಿತ್ತು ಆದ್ರೆ ಮಳೆಯಿಂದ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಇದೇ ವೇಳೆ ಬೆಂಗಳೂರಿನಲ್ಲಿ ಮತ್ತೆ ಕೋವಿಡ್ 4ನೇ ಅಲೆ ಭೀತಿ ಎದುರಾಗಿದ್ದು, ಕೋವಿಡ್ ಟೆಸ್ಟ್ ಹೆಚ್ಚಿಸಲು ಬಿಬಿಎಂಪಿ ತಯಾರಿ ನಡೆಸಿದೆ. 16 ಸಾವಿರದ ಬದಲು 20 ಸಾವಿರ ಟೆಸ್ಟ್ ಗೆ ಪಾಲಿಕೆ ಪ್ಲಾನ್ ಮಾಡಿದೆ. ಮತ್ತೆ ಮಾಸ್ಕ್ ಹಾಕೋದು ಕಡ್ಡಾಯ ಮಾಡಲಿದ್ದು ಮಾರ್ಷಲ್ಸ್ ಮೂಲಕ ನಿಗಾ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ :- ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ