ಕಲಬುರಗಿಯಲ್ಲಿ ಭೀಕರ ರಸ್ತೆ ದುರಂತ- ನಾಲ್ವರು ಸಜೀವ ದಹನ

ಕಲಬುರ್ಗಿಯಲ್ಲಿ (kalaburgi) ಖಾಸಗಿ ಸ್ಲೀಪರ್ ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್ (bus) ಹೊತ್ತು ಉರಿದ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ.

ಬೀದರ್ – ಶ್ರೀರಂಗಪಟ್ಟಣ (Bidar- srirangapatana) ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದೆ. ಗೋವಾ ಮೂಲದ ಆರೆಂಜ್ ಕಂಪನಿಗೆ ಸೇರಿದ ಸ್ಲೀಪರ್ ಬಸ್ ಎನ್ನಲಾಗಿದೆ, ಬೆಳಗ್ಗೆ 6-30 ರ ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು ಬಸ್ – ಗೂಡ್ಸ್ ಲಾರಿ ಅಪಘಾತದ ನಂತರ ಬಸ್ ಪಲ್ಟಿ ಬೆಂಕಿಯಿಂದ ಬಸ್ ಹೊತ್ತಿ ಉರಿದಿದೆ. ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಚಾಲಕ ಸೇರಿ ಬಸ್ ನಲ್ಲಿ ಸುಮಾರು 35 ಜನರಿದ್ದರು ಎಂದು ಅಂದಾಜಿಸಲಾಗಿದೆ. 12 ಜನರನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ..ಮೃತರೆಲ್ಲರೂ ಹೈದರಾಬಾದ್ (Hyderabad) ಮೂಲದವರು ಎನ್ನಲಾಗಿದೆ. ಗೋವಾದಿಂದ (Goa) ಹೈದ್ರಾಬಾದ್ ಗೆ ಬಸ್ ತೆರಳುತ್ತಿತ್ತು ಎನ್ನಲಾಗಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದನ್ನೂ ಓದಿ : – ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋ ಅಗತ್ಯ ಇಲ್ಲ – ಮೋಹನ್ ಭಾಗವತ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!