ಬೆಂಗಳೂರು : ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ತಜ್ಞರು ಇದ್ದಾರೆ. 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ರಾಜ್ಯದಲ್ಲಿ ಔಷಧ ಕೊರತೆ ಇರುವುದು ನಿಜ. ಆದರೆ ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರ ಜೊತೆ ನಿಕಟ ಸಂಕರ್ಪದಲ್ಲಿದ್ದೇವೆ ಎಂದರು.
ದೇಶದಲ್ಲಿ ಬ್ಲ್ಯಾಕ್ ಫಂಗಸ್ನಿಂದ 100-300 ಜನ ಸಾವನ್ನಪ್ಪುತ್ತಿದ್ದರು.ಈಗ ನಮ್ಮ ರಾಜ್ಯದಲ್ಲಿ 300 ಕ್ಕೂ ಅಧಿಕ ಕೇಸ್ಗಳು ಇವೆ. ಒಂದು ಸಾವಿರ ವಯಲ್ಸ್ ಕಳಿಸಿಕೊಡುವ ನಿರೀಕ್ಷೆ ಇದೆ. ರೋಗಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೇಂದ್ರದಿಂದ 1150 ವಯಲ್ಸ್ ಬಿಡುಗಡೆ ಮಾಡಿದ್ದಾರೆ. ನಾವು 20 ಸಾವಿರ ವಯಲ್ಸ್ ಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.