ರಾಯಚೂರು : ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಶಾಸಕರಾದ ರಾಜುಗೌಡ, ಪುಟ್ಟರಂಗ ಶೆಟ್ಟಿಯವರಿಗೆ ಕೊರೋನಾ ಸೋಂಕು ತಗುಲಿದೆ.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರಿಗೆ ಮೈ ಕೈನೋವು, ನೆಗಡಿ ಶುರುವಾಗಿದ್ದು ಅವರು ಕೋವಿಡ್ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಅವರ ಗನ್ ಮ್ಯಾನ್, ಡ್ರೈವರ್ ಗೂ ಕೊರೋನಾ ಟೆಸ್ಟ್ ಮಾಡಿಸಿದ್ದು ವರದಿ ಬರಬೇಕಿದೆ.
ಅದೇ ರೀತಿ ಸುರಪುರ ಬಿಜೆಪಿ ಶಾಸಕ ರಾಜು ಗೌಡರವರಿಗೂ ಸೋಂಕು ತಗುಲಿದೆ.ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ತಮ್ಮ ಸಂಪರ್ಕದಲ್ಲಿ ಬಂದವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಗೆ ಕೊರೋನಾ ಪಾಸಿಟಿವ್ ಬಂದಿತ್ತು. ಸದ್ಯ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ.