ಮಗಳ ಸಾವಿನ ಸುದ್ದಿ ಕೇಳಿದ ತಾಯಿ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.
ಸೋನಾಬಾಯಿ ಶಂಕರ ಬಾಗಡಿ (45) ಹೃದಯಾಘಾತದಿಂದ ಮೀರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸುದ್ದಿ ಕೇಳಿದ ತಾಯಿ ಜನಾಬಾಯಿ ಗೋಂಧಳಿ (62) ಕೂಡ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಸೋನಾಬಾಯಿಯವರ ಅಂತ್ಯಕ್ರಿಯೆ ಅಥಣಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ನಡೆದರೆ ತಾಯಿ ಜನಾಬಾಯಿಯವರ ಅಂತ್ಯಕ್ರಿಯೆ ಬನಹಟ್ಟಿಯ ರುದ್ರಭೂಮಿಯಲ್ಲಿ ನಡೆಯಿತು. ತಾಯಿ-ಮಗಳ ಸಾವಿನಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.