ರಾಮನಗರ : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಾವಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ಇಲ್ಲದ ಕಾರಣ ಸರಕಾರ ಕಣ್ಣುಮುಚ್ಚಾಲೆ ಆಟ ಆಡುತ್ತಿದೆ ಎಂದರು.
ಹೆಚ್ಚುವರಿ ಆಕ್ಸಿಜನ್ ಬೆಡ್ ಆರಂಭ ಮಾಡಬೇಡಿ ಅಂತಾ ಸರಕಾರ ಹೇಳುತ್ತಿದೆ, ಆಕ್ಸಿಜನ್ ಕೊರತೆಯಿಂದ ಜಿಲ್ಲೆಯಲ್ಲಿ ಹೆಚ್ಚುವರಿ ಬೆಡ್ಗಳನ್ನ ಮಾಡಲು ಸಾದ್ಯವಾಗುತ್ತಿಲ್ಲ, ಜಿಲ್ಲೆಗೆ ಮೂರೂವರೆ ಕೆ.ಎಲ್ ಆಕ್ಸಿಜನ್ ಬರುತ್ತಿದೆ. ಇನ್ನೂ ಹೆಚ್ಚುವರಿಯಾಗಿ 7 ಕೆ.ಎಲ್ ಆಕ್ಸಿಜನ್ ಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆಗಳಲ್ಲಿನ ಎಲ್ಲಾ ಆಕ್ಸಿಜನ್ ಬೆಡ್ ಗಳನ್ನ ಉಪಯೋಗಿಸಲು 12 ಕೆ.ಎಲ್ ಆಕ್ಸಿಜನ್ ಬೇಕು, ರಾಮನಗರ ಜಿಲ್ಲೆಯಿಂದ ಒಬ್ಬ ಸೋಂಕಿತ ವ್ಯಕ್ತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಲ್ಲ, ಸರಕಾರದ ಬಳಿ ಅಂತಹ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ್ದರು.
ಜಿಲ್ಲಾಧಿಕಾರಿಗಳು ಸರಕಾರದ ಪರವಾಗಿ ಮಾತನಾಡಬೇಕು ಮಾತನಾಡುತ್ತಾರೆ, ಆಕ್ಸಿಜನ್ ಕೊರತೆ ರಾಜ್ಯದಲ್ಲಿ ಯಾವ ರೀತಿ ಇದೆಯೋ ಅದೇ ರೀತಿ ರಾಮನಗರದಲ್ಲಿಯು ಇದೆ ಎಂದರು.