ಕೋಲಾರ: ಹದಿನಾರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ರಾಜ್ಯ ಬೀಜ ನಿಗಮ ನಿರ್ದೇಶಕ ಸೇರಿ ಆರು ಮಂದಿಗೆ ಒಂದನೇ ಅಧಿಕ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.
22 ಜುಲೈ 2006 ರಂದು ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ವಡಗೂರು ಗ್ರಾಮದಲ್ಲಿ ನಡೆದಿದ್ದ ಜಯರಾಂ ಮತ್ತು ದೊಡ್ಡಪ್ಪಯ್ಯ ಇಬ್ಬರ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಡಿ ಎಲ್.ನಾಗರಾಜು, ಗೋವಿಂದಪ್ಪ, ಮುನಿಬೈರಪ್ಪ, ರೆಡ್ಡಿ, ಸೋಮಶೇಖರ್ ಎನ್ನುವವರಿಗೆ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆ ನೀಡಿ, ನ್ಯಾಯಾಧೀಶರಾದ ಡಿ. ಪವನೇಶ್ ರಿಂದ ಮಹತ್ವದ ತೀರ್ಪು ಪ್ರಕಟಸಿದ್ದಾರೆ.
ಗ್ರಾಮದಲ್ಲಿ ನಡೆದಿದ್ದ ಶೂಟೌಟ್ ನಲ್ಲಿ ಜಯರಾಂ ಎನ್ನುವವರ ಕೊಲೆ ನಡೆದಿದ್ದು ಇದರಿಂದ ಕೆರಳಿದ ಜಯರಾಂ ಕಡೆಯ ಗುಂಪು ದೊಡ್ಡಪ್ಪಯ್ಯ ಮನೆಗೆ ನುಗ್ಗಿ ಕೊಲೆ ಮಾಡಲಾಗಿತ್ತು. ಸುದೀರ್ಘ 16 ವರ್ಷಗಳ ಕಾಲ ವಿಚಾರಣೆ ನಡೆಸಿ ಅಂತಿಮವಾಗಿ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.