ಬೆಂಗಳೂರು: ದೇಶಾದ್ಯಂತ ಕೊರೋನಾ ಮಹಾಮಾರಿ ಸಾಕಷ್ಟು ಆತಂಕವನ್ನು ಸೃಷ್ಟಿಸುತ್ತಿದೆ. ನಿಯಂತ್ರಣ ಮೀರಿ ಕೊರೋನಾ ಸೋಂಕು ಹಬ್ಬುತ್ತಿದೆ. ಕೊರೋನಾ ವಾರಿಯರ್ಸ್ ಜನರ ರಕ್ಷಣೆಗೆ ಪಣ ತೊಟ್ಟು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬಿಡುವಿಲ್ಲದೇ ಹೋರಾಡುತ್ತಿದ್ದಾರೆ.
ಹೀಗೆ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಈ ಸಿಬ್ಬಂದಿ ಅದೆಷ್ಟು ಬಳಲಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾದ ಫೋಟೋವೊಂದು ಈಗ ವೈರಲ್ ಆಗುತ್ತಿದೆ. ಪಿಪಿಇ ಕಿಟ್ ಧರಿಸಿ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದ ನರ್ಸ್ ಗೋಡೆಗೆ ಒರಗಿ ವಿಶ್ರಾಂತಿ ಪಡೆದುಕೊಳ್ಳುವ ಪಡೆಯುತ್ತಿರುವ ದಾದಿಯ ಫೋಟೋ ಸಾಕಷ್ಟು ಸುದ್ದಿ ಮಾಡುತ್ತಿದೆ.
ಆರೋಗ್ಯ ಸಲಹೆಗಾರ್ತಿ ವಂದನಾ ಮಹಾಜನ್ ಈ ಮನಮಿಡಿಯುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈದ್ಯರು, ದಾದಿಯರು, ಸಹೋದರಿಯರು ಮತ್ತು ಸಹೋದರರು, ಸ್ವಚ್ಛತಾ ಸಿಬ್ಬಂದಿ ಮತ್ತು ಇತರ ಸಿಬ್ಬಂದಿ ಸೇರಿದಂತೆ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ಅಡಿಬರಹದಲ್ಲಿ ಈ ಫೋಟೋವನ್ನು ಶೇರ್ ಮಾಡಲಾಗಿದೆ.