ಧಾರವಾಡ ತತ್ವಜ್ಞಾನದ ಭಂಡಾರ, ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ.ಇದನ್ನು ಮುಖಸ್ಥಿತಿಗೆ ನಾನು ಹೇಳುತ್ತಿಲ್ಲ ಇತಿಹಾಸ ತೆರೆದು ನೋಡಿ, ಈ ಊರಿಗೆ ಅಂತಹ ಒಂದು ಪರಂಪರೆ ಇದೆ. ಕಲೆ, ಸಾಹಿತ್ಯ, ವಿದ್ಯೆ, ಸಂಗೀತ ಎಲ್ಲವನ್ನೂ ಈ ನೆಲ ಹೊಂದಿದೆಯೆಂದು ಸಿಎಂ ಹೇಳಿದ್ದಾರೆ .
ಧಾರವಾಡದಲ್ಲಿ ಮಾತಾಡಿದ ಅವರು ಸಂಗೀತ ಮತ್ತು ಸಾಹಿತ್ಯ ಒಂದೇ ಕಡೆ ಇರೋದಿಲ್ಲ. ಅದು ಧಾರವಾಡದಲ್ಲಿ ಮಾತ್ರ ಇದೆ ಸಂಗೀತ-ಸಾಹಿತ್ಯ ಇಲ್ಲಿ ಕೂಡಿ ಇದೆ.ಇಲ್ಲಿನಿಂದಲೇ ಅನೇಕ ಸಾಹಿತಿ, ಸಂಗೀತಗಾರರು ಪ್ರಸಿದ್ಧರಾಗಿದ್ದಾರೆ.ಅದು ಧಾರವಾಡದ ಮಣ್ಣಿನ ಗುಣಧರ್ಮ ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ. ಇದನ್ನೂ ಓದಿ : – ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- ವಿದ್ಯುತ್ ತಂತಿ ಹರಿದು ಬಿದ್ದು ಎರಡು ಹಸುಗಳು ಸಾವು
ಬಸವ ಪರಂಪರೆಯಲ್ಲಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು.ಚನ್ನಬಸವೇಶ್ವರರು ಇತರ ವಚನಕಾರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು.ಕಟು ಸತ್ಯಗಳನ್ನು ಚನ್ನಬಸವಣ್ಣ ಹೇಳಿದ್ದಾರೆ.ಬಸವಣ್ಣ ಇನ್ನೂ ಪ್ರಸ್ತುತ ಅಂತಾ ನಾವು ಹೇಳುತ್ತೇವೆ.ಬಸವಣ್ಣ ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ಲಿಂಗಬೇಧ ವಿರುದ್ಧ ಹೋರಾಡಿದ್ದರು.
ಅವರು ಪ್ರಸ್ತುತ ಅಂತಾದ್ರೆ ಇವೆಲ್ಲವೂ ಇನ್ನೂ ಇವೆ ಅಂತಾ ಅರ್ಥ. 900 ವರ್ಷವಾದರೂ ಅಸಮಾನತೆ, ಮೂಢನಂಬಿಕೆ ಇನ್ನೂ ಇದೆ.ಇದನ್ನು ನೋಡಿದಾಗ ಬಸವಾಭಿಮಾನಿಗಳು ವಿಚಾರ ಮಾಡಬೇಕಿದೆ . 108 ಜನ ವಚನಕಾರರ ವಿಚಾರ ಪೂರ್ಣ ಪ್ರಮಾಣ ಜಾರಿಗೆ ತರಬೇಕಿದೆ.ಬಸವ ಪಥವೆ ನನ್ನ ಪಥಈ ಮಾದರಿಯಲ್ಲೇ ನಾನು ಕೆಲಸ ಮಾಡುತ್ತಿರುವೆ ಎಂದು ಸುದ್ದಿಘೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಮಾತಾನಾಡಿದ್ದಾರೆ.ಇದನ್ನೂ ಓದಿ :- ಟಿ20 ಕ್ರಿಕೆಟ್ ನ ಐಸಿಸಿ ರ್ಯಾಂಕಿಂಗ್ ನಲ್ಲಿ ಭಾರತಕ್ಕೆ ಅಗ್ರಸ್ಥಾನ