ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ತಲೆ ಕೆಟ್ಟಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಿಸಲ್ಲ ಎಂಬ ವಿಶ್ವನಾಥ್ ಹೇಳಿಕೆ ಈ ರೀತಿ ಪ್ರತಿಕ್ರಿಯಿಸಿದರು.
ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ನೀಡಲಿಲ್ಲ ಎಂದು ಹೀಗೆ ಮಾತನಾಡಿದರೆ ಶೋಭೆ ತರುವುದಿಲ್ಲ. ಯಡಿಯೂರಪ್ಪ ಅವರು ಸ್ವತಃ ಕೊರೊನಾ ಬಂದ ಸಂದರ್ಭದಲ್ಲೇ 3 ದಿನಕ್ಕೆ ಹೊರಗೆ ಬಂದು ಕೆಲಸ ಮಾಡಿದ್ದಾರೆ. ಲಾಕ್ ಡೌನ್ ಮಾಡಿ ಪ್ರತೀ ಜಿಲ್ಲೆಗೆ ಉಸ್ತುವಾರಿ ಗಳನ್ನ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಜನರ ಕಷ್ಟವನ್ನ ನೋಡಿ ಕೆಲಸ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರ ಕಷ್ಟ ಸುಖಗಳಿಗೆ ಸ್ಪಂದಿಸಿ ರೈತರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಿಎಂ ಅವರಿಗೆ ಜನರ ಅಳಲು ಗೊತ್ತಾಗುತ್ತಿದೆ ಎಂದು ಪ್ರತಾಪ್ ವಿವರಿಸಿದರು.
ಜನರ ಬಗ್ಗೆ ಇಷ್ಟು ಸಂವೇದನೆ ಇರುವ, ಜನರ ಬಗ್ಗೆ ಕಾಳಜಿ ತೋರುವ ವ್ಯಕ್ತಿಯನ್ನ ಕಣ್ಣು ಕಾಣಿಸಲ್ಲ ಕಿವಿ ಕೇಳಲ್ಲ ಎಂದರೆ ಅವರಿಗೆ ತಲೆ ಸರಿ ಇಲ್ಲ ಎಂದರ್ಥ. ಮಂತ್ರಿ ಸ್ಥಾನ ಕೊಡಲಿಲ್ಲ ಎಂಬ ಕಾರಣಕ್ಕೆ ಹೀಗೆ ಮಾತನಾಡೋದು ಅಂದ್ರೆ ಶೋಭೆ ತರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.