ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ ನೀರಜ್ ಚೋಪ್ರಾ ಅವರ ಜಾವೆಲಿನ್ ಮತ್ತು ಮಹಿಳಾ ಬಾಕ್ಸರ್ ಲವ್ಲಿನಾ ಅವರ ಗ್ಲೌಸ್ ಗಳು ತಲಾ 10 ಕೋಟಿ ರೂ.ಗೆ ಹರಾಜಾಗಿದೆ.
ಚಿನ್ನದ ಪದಕ ಗೆಲ್ಲಲು ಕಾರಣವಾಗಿದ್ದ ಜಾವೆಲಿನ್ ಮತ್ತು ಬಾಕ್ಸಿಂಗ್ ಗ್ಲೌಸ್ ಗಳನ್ನು ನೀರಜ್ ಚೋಪ್ರಾ ಮತ್ತು ಲವ್ಲಿನಾ ಬೊರ್ಗೊಹಿನ್ಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇವು ಅಲ್ಲದೇ ಇತರೆ ಸಾಮಾಗ್ರಿಗಳನ್ನು ಶುಕ್ರವಾರ ಹರಾಜು ಹಾಕಲಾಯಿತು.
ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ನೀಡಿದ ಕ್ರೀಡಾ ಉಪಕರಣಗಳನ್ನು ಶುಕ್ರವಾರ ಇ-ಹರಾಜು ಮೂಲಕ ಹರಾಜಿಗೆ ಇಡಲಾಗಿದ್ದು, ಅಕ್ಟೋಬರ್ 7ರವರೆಗೆ ಮುಂದುವರಿಯಲಿದೆ. ಹರಾಜಿನ ಎರಡನೇ ದಿನವಾದ ಶನಿವಾರ ನೀರಜ್ ಚೋಪ್ರಾ ಅವರ ಜಾವೆಲಿನ್ ಮತ್ತು ಲಾವ್ಲಿನಾ ಅವರ ಬಾಕ್ಸಿಂಗ್ ಗ್ಲೌಸ್ ಗಳು ತಲಾ 10 ಕೋಟಿ ರೂ.ಗೆ ಹರಾಜಾಗಿದೆ.
ಪ್ಯಾರಾಲಿಂಪಿಯನ್ ಸುಮಿತ್ ಅಂಟಿಲ್ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ 3 ಕೋಟಿ ರೂಗೆ, ಹಾರಾಜಾಗಿದೆ. ಹರಾಜಿನಲ್ಲಿ ಪಿವಿ ಸಿಂಧು ಅವರ ಬ್ಯಾಡ್ಮಿಂಟನ್ ರಾಕೆಟ್, ಭಾರತ ಮಹಿಳಾ ಹಾಕಿ ತಂಡದ ಸ್ಟಿಕ್ ಕೂಡ ಸೇರಿವೆ. ಪ್ರಸ್ತುತ ಬ್ಯಾಡ್ಮಿಂಟನ್ ರಾಕೆಟ್ ಗೆ 2 ಕೋಟಿ ಹಾಗೂ ಹಾಕಿ ಸ್ಟಿಕ್ ಗೆ 1 ಕೋಟಿ ರೂ. ಹರಾಜಿನಲ್ಲಿ ಬಿಡ್ ಮಾಡಲಾಗಿದೆ.