ನೀಟ್ – ಪಿಜಿ ಕೌನ್ಸೆಲಿಂಗ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನೀಟ್,(NEET) ಪಿಜಿ (PG) 2021 ರಲ್ಲಿ ಅರ್ಹತೆ ಪಡೆದವರಿಗಾಗಿ ನಡೆದ ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್ ನಂತರವೂ ಉಳಿದ 1,456 ಸೀಟುಗಳನ್ನು ಭರ್ತಿ ಮಾಡಲು ಮತ್ತೊಂದು ಸುತ್ತಿನ ವಿಶೇಷ ಕೌನ್ಸಲಿಂಗ್ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (SUPREME COURT ) ವಜಾಗೊಳಿಸಿದೆ.

ನೀಟ್- ಪಿಜಿ ವಿಶೇಷ ಕೌನ್ಸೆಲಿಂಗ್ ಅವಕಾಶ ನೀಡದಿರುವ ಕೇಂದ್ರ ಸರ್ಕಾರ ಮತ್ತು ವೈದ್ಯಕೀಯ ಮಂಡಳಿಯ ನಿರ್ಧಾರವು ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಹಿತಾಸಕ್ತಿಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾಕಾಲದ ಪೀಠ ಹೇಳಿದೆ. ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಿಂದ ಸರ್ಕಾರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ವಿಶೇಷ ಕೌನ್ಸೆಲಿಂಗ್ ಗೆ ಅವಕಾಶ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನು ಓದಿ :- SUPREMECOURT- ಹಿಜಾಬ್ ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ – ಸಿಜೆಐ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!