ಕೊರೊನಾ ಸಂಕಷ್ಟ ಕಾಲದಲ್ಲಿ ಅಜ್ಜಿಯನ್ನು ಮನೆಯವರಿಂದಲೇ ಬೀದಿ ಪಾಲಾಗಿದ್ದ ಅಜ್ಜಿಯನ್ನು ಪೊಲೀಸರ ನೆರವಿನೊಂದಿಗೆ ಸ್ನೇಹಜೀವಿ ಬಳಗದವರು ಮನೆ ಸೇರಿಸಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಟ್ಟೆಮಳವಾಡಿಯ ಅಗ್ರಹಾರದ ನಿವಾಸಿ ಅಜ್ಜಿಯನ್ನು ಸ್ಕೂಟರ್‌ನಲ್ಲಿ ಮೈಸೂರಿಗೆ ತಂದು ಮಕ್ಕಳು ಬಿಟ್ಟು ಹೋಗಿದ್ದರು.
ಮಕ್ಕಳೇ ನನಗೆ ಕಿರುಕುಳ ಕೊಡುತ್ತಾರೆ. ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಅಜ್ಜಿಯ ಮನವೊಲಿಸಿದ ಹುಣಸೂರಿನ ಸ್ನೇಹಜೀವಿ ಬಳಗದ ಸದಸ್ಯರು ಪೊಲೀಸರ ನೆರವಿನೊಂದಿಗೆ ಅಜ್ಜಿಯನ್ನು ಮನೆಗೆ ತಲುಪಿಸಿದ್ದಾರೆ.
ಅಜ್ಜಿಯನ್ನು ಅವರ ಮನೆಗೆ ತಲುಪಿಸಿ ಚೆನ್ನಾಗಿ ನೋಡಿಕೊಳ್ಳುವಂತೆ ಮಕ್ಕಳಿಗೆ ಬುದ್ದಿ ಹೇಳಿ ಬಂದ ಪೊಲೀಸರು, ಸ್ನೇಹ ಬಳಗ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.