ಬಿಜೆಪಿ ಅಧಿಕಾರ ಬಂದಾಗಲೆಲ್ಲಾ ಪಠ್ಯ ಪುಸ್ತಕ ಕೇಸರಿಕರಣ ಆಗುತ್ತದೆ. ಅವರ ಸಿದ್ದಾಂತ ಒಪ್ಪಿ ಪ್ರಚಾರ ಮಾಡಿದವರನ್ನು ಪಠ್ಯ ಪುಸ್ತಕದಲ್ಲಿ ಸೇರಿಸುತ್ತಾರೆ ಎಂದು ಬಿಜೆಪಿ ಸರಕಾರದ ವಿರುದ್ದ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-21-at-12.04.51-PM-1.jpeg)
ಕೊರಟಗೆರೆಯ ಚಿನ್ನಹಳ್ಳಿಯಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಒಬ್ಬ ನಟ ಅಷ್ಟೇ. ಅವರ ಕೈಯಲ್ಲಿ ಯಾವುದೇ ನಿರ್ಧಾರ ಇಲ್ಲ. ಸ್ಕ್ರಿಪ್ಟ್ ಬರೆಯೋರೇ ಬೇರೆ…ನಾಗೇಶ್ ಅವರದ್ದು ಕೇವಲ ನಟನೆ ಮಾತ್ರ. ಹಾಗಾಗಿ ಬಿ.ಸಿ.ನಾಗೇಶ್ ಅವರ ರಾಜೀನಾಮೆಯಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಯಾವ ಮಹನೀಯರನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿಲ್ಲ ಎಂದು ಹೇಳಿದ್ರು. ಇದನ್ನೂ ಓದಿ :- ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣ – ವಿಚಾರಣೆ ಮೇ 26ಕ್ಕೆ ಮುಂದೂಡಿದ ಜಿಲ್ಲಾ ಕೋರ್ಟ್
![](https://rajnewskannada.in/wp-content/uploads/2022/05/para-1.png)
ಕಾಂಗ್ರೆಸ್ ನಲ್ಲಿ ಪರಿಷತ್ ಟಿಕೇಟ್ ಫೈಟ್ ವಿಚಾರ
ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ, ಸಹಜವಾಗಿಯೇ ಆಕಾಂಕ್ಷಿಗಳು ಹೆಚ್ಚಿಗೆ ಇರುತ್ತಾರೆ. ಆಯ್ಕೆ ಮಾಡುವಾಗ ಮಾನದಂಡವನ್ನು ಎಐಸಿಸಿ ನೋಡುತ್ತೆ. ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರಿಗೆ ಕೊಡಬೇಕು ಎಂದು ಎಐಸಿಸಿ ಮೊದಲೇ ತೀರ್ಮಾನಿಸಿತ್ತು. ಇಲ್ಲಿ ಯಾವುದೇ ಬಣದ ಕೈ ಮೇಲುಗೈ ಆಗಿಲ್ಲ. ಕಾಂಗ್ರೆಸ್ ಪಕ್ಷದ ಕೈ ಮೇಲು ಗೈ ಆಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ. ಅಭಿಪ್ರಾಯ ಬೇರೆ ಬೇರೆ ಇರಬಹುದು. ಆದರೆ ಪರಿಷತ್ ಟಿಕೆಟ್ ನೀಡುವಂತೆ ನಾನು ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದ್ರು.
ಇದನ್ನೂ ಓದಿ :- ಸಾಮಾನ್ಯ ಕಾರ್ಯಕರ್ತರಿಗೆ ಹೈಕಮಾಂಡ್ ಟಿಕೆಟ್ ನೀಡಿರೋದು ಸಂತಸ ತಂದಿದೆ – ಸತೀಶ್ ಜಾರಕಿಹೊಳಿ