ಎರಡೂ ದೇಶಗಳ ನಡುವಣ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜೊತೆ ಟಿವಿಯಲ್ಲಿ ಚರ್ಚೆ ನಡೆಸಲು ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನಿಸಿದ್ದಾರೆ.
ರಷ್ಯಾದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಎರಡೂ ದೇಶಗಳು ಸ್ವಾತಂತ್ರ್ಯ ನಂತರ ಕ್ಲಿಷ್ಟಕರ ಸಂಬಂಧ ಹೊಂದಿದೆ. ಮೂರು ಯುದ್ಧಗಳು ಮುಗಿದರೂ ಸಮಸ್ಯೆ ಬಗೆಹರಿಯುವಂತೆ ಕಾಣಸುತ್ತಿಲ್ಲ ಎಂದರು.
ನರೇಂದ್ರ ಮೋದಿ ಜೊತೆ ಟೀವಿಯಲ್ಲಿ ನೇರ ಪ್ರಸಾರದಲ್ಲಿ ಚರ್ಚೆ ಮಾಡಿದರೆ ಎರಡೂ ದೇಶಗಳ ಕೋಟ್ಯಾಂತರ ಜನರಿಗೆ ಅನುಕೂಲ ಆಗಲಿದೆ. ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.