ಕೊರೊನಾ ಮೊದಲ ಅಲೆಯ ನಂತರ ಎಲ್ಲರೂ ಮೈಮರೆತಿದ್ದರಿಂದ ಇಂದು ದೇಶದಲ್ಲಿ ಈ ದುಸ್ಥಿತಿ ಬಂದಿದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ಭಾನುವಾರ ನಡೆದ ಆರ್ ಎಸ್ ಎಸ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದರೂ ಸಹ ಜನರು, ಸರಕಾರ, ಅಧಿಕಾರಿಗಳು ಸೇರಿದಂತೆ ಎಲ್ಲರೂ ಮೈಮರೆತು ನಿರ್ಲಕ್ಷ್ಯ ವಹಿಸಿದರು. ಈಗ ಮೂರನೇ ಅಲೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಕೊರೊನಾ ಎರಡನೇ ಅಲೆಯಲ್ಲಿ ದೇಶ ತತ್ತರಿಸಿದೆ. ಈಗ ಮೂರನೇ ಅಲೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಹೆದರಬೇಕೋ ಅಥವಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೋ? ಭವಿಷ್ಯದ ದೃಷ್ಟಿಯಿಂದ ನಾವು ಈಗಿನ ಪರಿಸ್ಥಿತಿಯಿಂದ ಪಾಠ ಕಲಿಯಬೇಕಾಗಿದೆ ಎಂದು ಭಾಗವತ್ ಸಲಹೆ ನೀಡಿದರು.