ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಇದರಿಂದ ಜನರು ಕೊರೊನಾ ಭೀತಿ ನಡುವೆ ಇಂಧನ ದರ ಏರಿಕೆಯಿಂದ ತತ್ತರಿಸುವಂತಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 22ರಿಂಧ 27 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 28ರಿಂದ 30 ಪೈಸೆಯಷ್ಟು ಏರಿಕೆ ಕಂಡಿದೆ.
ದೆಹಲಿಯಲ್ಲಿ ಇದೀಗ ಪೆಟ್ರೋಲ್ ಬೆಲೆ 90.99 ರೂ.ಗೆ ಏರಿಕೆಯಾದರೆ, ಮುಂಬೈನಲ್ಲಿ 97.34 ರೂ., ಬೆಂಗಳೂರಿನಲ್ಲಿ 97.34 ರೂ. ಕೋಲ್ಕತಾದಲ್ಲಿ 91.14 ರೂ. ಹಾಗೂ ಚೆನ್ನೈನಲ್ಲಿ 92.97 ರೂ. ಆಗಿದೆ.
ಡೀಸೆಲ್ ಬೆಲೆ ದೆಹಲಿಯಲ್ಲಿ 81.12 ರೂ., ಬೆಂಗಳೂರಿನಲ್ಲಿ 86.31 ರೂ., ಮುಂಬೈನಲ್ಲಿ 88.89 ರೂ., ಕೋಲ್ಕತಾದಲ್ಲಿ 84.26 ರೂ. ಚೆನ್ನೈನಲ್ಲಿ 86.42 ರೂ. ಆಗಿದೆ.