ಸುರಪುರ ವಿಭಾಗದ ಡಿವೈಎಸ್ ಪಿ ವೆಂಕಟೇಶ ಹುಗಿಬಂಡಿ ನೇತೃತ್ವದಲ್ಲಿ ವಿಶೇಷ ಪರೇಡ್ ಜಾಥಾ ಮಾಡುವ ಮೂಲಕ ಕೆಂಬಾವಿ ಪಟ್ಟಣದಲ್ಲಿ ಜನಸ್ನೇಹಿ ಪೊಲೀಸ್ ಎಂಬ ಟ್ಯಾಗ್ ಲೈನ್ ನೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಡಿವೈಎಸ್ ಪಿ ವೆಂಕಟೇಶ ಹುಗಿಬಂಡಿ ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಅಪಘಾತಗಳು ಮಧ್ಯಪಾನ ಹಾಗೂ ಲೈಸನ್ಸ್ ಇಲ್ಲದೇ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಿಂದ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಇನ್ನು ಮುಂದೆ ಪ್ರತಿಯೊಬ್ಬ ನಾಗರಿಕರೂ ಸಹ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಜೊತೆಗೆ ವಾಹನ ಸವಾರರು ಡಾಕ್ಯುಮೆಂಟ್ಸ್ ಗಳನ್ನು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.. ಅಷ್ಟೇ ಅಲ್ಲದೇ ಜನಸಾಮಾನ್ಯರು ಕಾನೂನು ಬಾಹಿರ ಚಟುವಟಿಕೆಗಳಾದ ಮಟಕಾ, ಅಕ್ರಮ ಮಧ್ಯ ಸಾಗಾಟ, ಕಳ್ಳತನ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಟ್ರಾಕ್ಟರ್ ಟ್ರ್ಯಾಲಿ ಗಳಿಗೆ ರೇಡಿಯಂ ಹಚ್ಚುಚ ಮೂಲಕ ರಸ್ತೆಯ ಸುರಕ್ಷತೆಯ ಬಗ್ಗೆ ಜಾಗೃತಿ ಜನರ ಗಮನ ಸೆಳೆಯಿತು.. ಈ ಒಂದು ಜನಸ್ನೇಹಿ ಪೊಲೀಸ್ ಪೇರೆಡ್ ನಲ್ಲಿ ಸಿಪಿಐ ದೌಲತ ಕುರಿ, ಸುನೀಲ ಮೂಲಿಮನಿ, ಶ್ರೀನಿವಾಸ್ ಅಲ್ಲಾಪೂರ ,ಚೆನ್ನಯ್ಯ ಹಿರೇಮಠ, ಹಾಗೂ ಪಿಎಸ್ ಐ ಕೆಂಭಾವಿ ಠಾಣೆಯ ಗಜಾನಂದ ಬಿರಾದರ, ಬಾಷುಮೀಯಾ, ಅಯ್ಯಪ್ಪ , ಸಂತೋಣ ರಾಠೋಡ, ಸಿದ್ದೇಶ್ವರ ಗರಡಿ,ಹನುಮಂತ ಚಂದ್ರಶೇಖರ ಇತರೆ ಪಿಎಸ್ ಐ ಹಾಗೂ ಎ ಎಸ್ ಐ ಸುರಪುರ ಉಪ ವಿಭಾಗದ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದರು.