ಕೋಲಾರ: ಇಂದಿನಿಂದ ಹದಿನಾಲ್ಕು ದಿನಗಳ ಕಾಲ ಕಟ್ಟು ನಿಟ್ಟಿನ ಲಾಕ್ ಡೌನ್ ಹಿನ್ನೆಲೆ ಅನವಶ್ಯವಾಗಿ ಓಡಾಡುತ್ತಿದ್ದ ಮಂಗಳಮುಖಿಗೆ ಪೋಲೀಸರು ಲಾಠಿ ರುಚಿ ತೋರಿಸಿರುವ ಘಟನೆ ಕೋಲಾರ ನಗರದ ಅಮ್ಮವಾರಿ ಪೇಟೆ ವೃತ್ತದ ಬಳಿ ಜರುಗಿದೆ.
ಮೆಡಿಕಲ್ ಶಾಪ್ ಗೆ ಹೋಗಬೇಕು ಅಂತ ನೆಪ ಹೇಳಿಕೊಂಡು ಮಂಗಳಮುಖಿ ಬಂದಿದ್ದರು. ಇದರಿಂದ ಕೋಪಗೊಂಡ ಗಲ್ ಪೇಟೆ ಪೊಲೀಸ್ ಪಿಎಸ್ಐ ವೇದಾವತಿ ಯಿಂದ ಲಾಠಿ ರುಚಿ ತೋರಿಸಿದ್ದು, ಅಲ್ಲದೇ ಇದೇ ಕೊನೆ ಮತ್ತೆ ಅನಾವಶ್ಯಕವಾಗಿ ಓಡಾಡಬೇಡ ಎಂದು ಹೇಳಿ ಕಳುಹಿಸಿದರು. ತಕ್ಷಣ ಅಲ್ಲಿಂದ ಮಂಗಳಮುಖಿ ಸ್ಮಿತಾ ಜಾಗ ಖಾಲಿ ಮಾಡಿ ತೆರಳಿದ್ದಳು.
ಮತ್ತೆ ಅಲ್ಲಿಗೆ ಬಂದ ಮಂಗಳಮುಖಿ ದೂರದ ಅಂಗಡಿ ಬಳಿ ನಿಂತು ಪೊಲೀಸರನ್ನು ಗುರಾಯಿಸಲು ಮುಂದಾಗುತ್ತಾಳೆ. ಇದರಿಂದ ಮತ್ತೆ ಸಿಟ್ಟಿಗೆದ್ದ ಪಿಎಸ್ಐ ವೇದಾವತಿ ಪುಲ್ ಗರಂ ಆಗಿ ಮತ್ತೆ ಏಕೆ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದಕ್ಕೆ ಪಿಎಸ್ಐ ಮುಂದೇಯೆ ಬಟ್ಟೆ ಮೇಲಕ್ಕೆ ಎತ್ತಿ ಅಸಭ್ಯ ವರ್ತನೆ ಪ್ರದರ್ಶನ ಮಾಡಿದ್ದಳು.
ಇದರಿಂದ ಕೆರಳಿದ ಪಿಎಸ್ಐ ಲಾಠಿಯಿಂದ ಹೊಡೆಯಲು ಮುಂದಾದಾಗ ಮಂಗಳಮುಖಿ ಲಾಠಿಯನ್ನ ಹಿಡಿದುಕೊಳ್ಳಲು ಮುಂದಾಗಿದ್ದಳು. ಮಂಗಳಮುಖಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.