ಬೆಂಗಳೂರು : ಕರ್ಪ್ಯೂ ನಡುವೆ ನಡೆಯುತ್ತಿದ್ದ ಹುಕ್ಕಾಬಾರ್ ಮೇಲೆ ಪೊಲೀಸರ ದಾಳಿ ನಡೆಸಿ 20 ಮಂದಿಯನ್ನು ಬಸವನಗುಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿರುವ ಈ ಸ್ಮೋಕಿ ಬೀಚ್ ನಲ್ಲಿ ಬಾಗಿಲು ಬಂದಿ ಮಾಡಿಕೊಂಡು ಹುಕ್ಕಾಬಾರ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಬಸವನಗುಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಹುಕ್ಕಾ ಬಾರ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿ ತನಿಖೆ ಕೈಗೊಂಡಿದ್ದಾರೆ.