ಕೋಳಿ ಮಾಂಸ ಮುಟ್ಟಂಗಿಲ್ಲ! ರಾಜ್ಯದಲ್ಲಿ ಕೆಜಿಗೆ ₹300ರ ಗಡಿ ತಲುಪಿದ ಚಿಕನ್ ದರ

ರಾಜ್ಯದಲ್ಲಿ ಮಳೆಯಿಂದಾಗಿ ತರಕಾರಿ ದರ ಏರಿಕೆಯಾಗಿದೆ. ಕೇವಲ ತರಕಾರಿ ಮಾತ್ರವಲ್ಲ ಮಾಂಸ ಪ್ರಿಯರಿಗೂ ದುಬಾರಿ ಬೆಲೆಯ ಶಾಕ್ (PRICE HIKE) ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿಕನ್ (CHICKEN) ದರ ಪ್ರತಿ ಕೆಜಿಗೆ 310 ರೂಪಾಯಿಗೆ ಏರಿಕೆಯಾಗಿದೆ. ಮೊಟ್ಟೆಯೂ (EGG) ಸಹ ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿದೆ.

ಇದಕ್ಕೆಲ್ಲ ಕಾರಣ ಕೋಳಿ ಸಾಕಾಣಿಕೆಗೆ ಆಗುವ ಖರ್ಚು ಅಧಿಕವಾಗಿರುವುದು ಕಾರಣ ಎನ್ನಲಾಗಿದೆ.. ಮಟನ್ (MUTTON) ದರ ಈಗಾಗಲೇ ಪ್ರತಿ ಕೆಜಿಗೆ 700 ರೂಪಾಯಿ ಗಡಿ ದಾಟಿದೆ. ಈ ಮಧ್ಯೆ ಚಿಕನ್ ದರವು 150 ರೂಪಾಯಿಯೊಳಗೆ ಇದ್ದದ್ದು ಈಗ ಬರೋಬ್ಬರಿ 300 ರೂಪಾಯಿಗೇರಿದೆ. ಪ್ರತಿ ಕೆಜಿ ಚಿಕನ್ ಗೆ 300 ರೂಪಾಯಿ ಆಗಿರುವುದರಿಂದ ಚಿಕನ್ ಪ್ರಿಯರು ಖರೀದಿಸಲು ಹಿಂಜರಿಯುತ್ತಿದ್ದಾರೆ. ಇದನ್ನೂ ಓದಿ :- PSI CASE – ಪಿಎಸ್ಐ ನೇಮಕಾತಿ ಹಗರಣ- ತಲೆಮರೆಸಿಕೊಂಡಿದ್ದ ಕಿಲಾಡಿ ದಂಪತಿ’ ಕೊನೆಗೂ ಅಂದರ್..!

ಇದೇ ಪ್ರಥಮ ಭಾರಿ ಚಿಕನ್ ದರವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಳಿ ಸಾಕಾಣಿಕೆ ವೆಚ್ಚ ಜಾಸ್ತಿಯಾಗಿರೋದು ದರ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ಮೆಕ್ಕೆ ಜೋಳ ಪ್ರತಿ ಕ್ವಿಂಟಾಲ್ ಗೆ 2000-2500 ರೂಪಾಯಿ ಇದ್ದದ್ದು ಈಗ 3000-3500 ರೂಪಾಯಿಗೆ ಏರಿಕೆಯಾಗಿದೆ. ಸೋಯಾ ದರವು ಸಹ ಪ್ರತಿ ಟನ್ ಗೆ 30000 ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ ಸೇರಿ ಎಲ್ಲಾ ದರ ಹೆಚ್ಷಳವಾಗಿರುವುದರಿಂದ ಕೋಳಿ ಮಾಂಸದ ದರವು ಏರಿಕೆಯಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಕೋಳಿ ಮಾಂಸ ತಿನ್ನೋಕು ಹಿಂದೆ ಮುಂದೆ ನೋಡುವಂತಾಗಿದೆ. ಇದನ್ನೂ ಓದಿ : – UPSC Result 2021- ಯುಪಿಎಸ್ಸಿ ಅಂತಿಮ ಫಲಿತಾಂಶ ಪ್ರಕಟ-  ಶ್ರುತಿ ಶರ್ಮಾ ಟಾಪರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!