ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು 2 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಶಿಕ್ಷಕ ಮೃತಪಟ್ಟ ಘಟನೆ ಯಾದಗಿರಿಯಲ್ಲಿ ಜರುಗಿದೆ.
ಯಾದಗಿರಿ ತಾಲೂಕಿನ ಮುದ್ನಾಳ್ ಸಮೀಪದ ಕೋವಿಡ್ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ 34 ವರ್ಷದ ಶಿಕ್ಷಕ ಮೃತಪಟ್ಟಿದ್ದಾರೆ.
ಶುಕ್ರವಾರ ಮುಂಜಾನೆ ಸುಮಾರು 2 ಗಂಟೆಗಳ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸೊಂಕಿತರು ಸಂಕಷ್ಟಕ್ಕೆ ಸಿಲುಕಿದ್ದರು. ಆಕ್ಸಿಜನ್, ವೆಂಟಿಲೆಟರ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಸೋಂಕಿತರು ಪರದಾಡುವಂತಾಯಿತು.
ಕರೆಂಟ್ ಹೋದರೆ ಜನರೆಟರ್ ವ್ಯವಸ್ಥೆ ಇದೆ. ಆದರೆ ಡಿಸೇಲ್ ಇಲ್ಲದ ಕಾರಣ ವಿದ್ಯುತ್ ಪೂರೈಕೆ ಆಗಲಿಲ್ಲ. ಇದರಿಂದ ಸೋಂಕಿತರು ಆಸ್ಪತ್ರೆಯಲ್ಲಿ ನರಳುವಂತಾಯಿತು.
ಜಿಲ್ಲಾಡಳಿತದ ಎಡವಟ್ಟಿಗೆ ಸೋಂಕಿತರ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಭೇಟಿ ನೀಡಿ ಪರಿಶೀಲನೆ ನಡೆಸಿದರು.