ಬೆಂಗಳೂರು : ನಾಳೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆಗಲ್ಲ. ಯಾರೂ ಆಸ್ಪತ್ರೆ ಬಳಿ ಹೋಗಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ನಾಳೆ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಆಗಲ್ಲ. ಸಿರಮ್ ಇನ್ ಸ್ಟಿಟ್ಯೂಟ್ ನಿಂದ ಇನ್ನೂ ಲಸಿಕೆ ಬಂದಿಲ್ಲ. ಕಂಪನಿಗಳಿಂದ ಲಸಿಕೆ ಪೂರೈಕೆ ಆಗಬೇಕಿದೆ. ಲಸಿಕೆ ಪೂರೈಕೆ ಬಗ್ಗೆ ಇನ್ನು ಮಾಹಿತಿ ಬಂದಿಲ್ಲ. ಲಸಿಕೆ ಪೂರೈಕೆಯಾದ ಬಳಿಕ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ ನಂತರ ಲಸಿಕೆ ನೀಡಲಾಗುವುದು ಎಂದರು.
ಕೊರೊನಾ ಲಸಿಕೆ ಪಡೆಯಲು ನಾಳೆಯಿಂದ 18-44 ವರ್ಷದವರೆಗಿನ ಯಾರೂ ಆಸ್ಪತ್ರೆ ಬಳಿ ಹೋಗುವುದು ಬೇಡ. 45 ವರ್ಷ ಮೇಲ್ಪಟ್ಟವರಿಗೆ ಯಥಾಸ್ಥಿತಿಯಲ್ಲಿ ಲಸಿಕೆ ನೀಡಿಕೆ ಮುಂದುವರೆಯಲಿದೆ. ಇನ್ನು 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗೆ ಆರ್ಡರ್ ಮಾಡಲಾಗುತ್ತದೆ ಎಂದು ತಿಳಿಸಿದರು.