ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಣೀತಾ, ಕಳೆದ ವರ್ಷ ಮೇ ನಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ಇತ್ತೀಚೆಗೆ ಅವರ ಬೇಬಿ ಬಂಪ್ ಚಿತ್ರಗಳು ವೈರಲ್ ಆಗಿದ್ದವು. ‘ಸ್ತ್ರೀರೋಗ ತಜ್ಞೆ ತಾಯಿಯನ್ನು ಹೊಂದಿರುವುದು ನಿಜಕ್ಕೂ ನನ್ನ ಅದೃಷ್ಟ. ಆದರೆ ಅವರಿಗೆ ಭಾವನಾತ್ಮಕವಾಗಿ ಇದು ಕಠಿಣ ಸಮಯ ಎಂದು ಅವರು ಹೇಳಿದ್ದಾರೆ. ಕಡಿಮೆ ನೋವಿನಲ್ಲಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡಕ್ಕೆ ಧನ್ಯವಾದ ಎಂದು ಪ್ರಣೀತಾ ಹೇಳಿದ್ದಾರೆ. ಅರಿವಳಿಕೆ ತಜ್ಞ ಡಾ.ಸುಬ್ಬು ಮತ್ತು ಅವರ ತಂಡಕ್ಕೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಷಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಹೆಚ್ಚುಹೊತ್ತು ಕಾಯಲು ಸಾಧ್ಯವಿಲ್ಲ’ ಅಂತಾ ಅವರು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ :- ಪತಿ ಜೊತೆ ಫೋಟೋಶೂಟ್ ನಲ್ಲಿ ಮಿಂಚಿದ ಪ್ರಣಿತಾ