ಕಾಂಗ್ರೆಸ್(Congress) ಅಧ್ಯಕ್ಷೆ ಸೋನಿಯಾಗಾಂಧಿ (SONIYA GANDHI) ಬಳಿಕ ಪ್ರಿಯಾಂಕ ಗಾಂಧಿ(PRIYANKA GANDHI)ಗೂ ಕೊರೊನಾ ಪಾಸಿಟಿವ್ ಬಂದಿದೆ.
ಈ ಕುರಿತು ಖುದ್ದು ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರೋಗಲಕ್ಷಣಗಳೊಂದಿಗೆ ಧನಾತ್ಮಕ ಪರೀಕ್ಷೆಗೊಳಪಟ್ಟಿದ್ದೇನೆ. ಕೋವಿಡ್ (COVID)ನ ಎಲ್ಲ ಮಾರ್ಗಸೂಚಿ ಅನುಸರಿಸುವ ಮೂಲಕ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ಗೊಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಪರೀಕ್ಷೆಗೊಳಪಡುವಂತೆ ಮನವಿ ಮಾಡಿಕೊಂಡಿದ್ದಾರೆ.ನಿನ್ನೆಯಷ್ಟೇ ಸೋನಿಯಾ ಗಾಂಧಿಗೆ ಕೊರೊನಾ ಪಾಸಿಟಿವ್ (CORONA POSITIVE) ಬಂದಿತ್ತು. ಸೋನಿಯಾ ಗಾಂಧಿ ಈಗಾಗಲೇ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : – ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ ನೇಮಕ