ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ಪಾಪ್ ಗಾಯಕ ನಿಕ್ ಜೊನಸ್ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮಗು ಜನಿಸಿ 100 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವೈದ್ಯರ ಸಲಹೆ ಮೇರೆಗೆ ಮನೆಗೆ ಕರೆತಂದಿದ್ದಾರೆ. ನಿನ್ನೆ ವಿಶ್ವ ತಾಯಂದಿರ ದಿನ ಅಂಗವಾಗಿ ಪ್ರಿಯಾಂಕ ಮತ್ತು ನಿಕ್ ತಮ್ಮ ಮಗುವನ್ನು ಎತ್ತಿ ಮುದ್ದಾಡಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮುಖವನ್ನು ತೋರಿಸಿಲ್ಲ. ಇದನ್ನೂ ಓದಿ :- ಪತಿಯ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಕತ್ರಿನಾ ಕೈಫ್
ಜನವರಿಯಲ್ಲಿ ಬಾಡಿಗೆ ತಾಯ್ತನ ಮೂಲಕ ಮಗು ಬರಮಾಡಿಕೊಂಡಿದ್ದನು ಇನ್ಸ್ಟಾ ಗ್ರಾಂ ಮೂಲಕ ಬಹಿರಂಗಪಡಿಸಿದ್ದರು. ಇದುವರೆಗೆ ಮಗುವಿನ ಫೋಟೋ ವಾಗಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಕಳೆದ ಏಪ್ರಿಲ್ ನಲ್ಲಿ ಮಗುವಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ :- ಧನುಷ್ ತಮ್ಮ ಮಗ ಅಂತ ಮತ್ತೆ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ